ನ್ಯೂಸ್ ನಾಟೌಟ್: ಹಸಿರ ಕ್ರಾಂತಿಯ ವೀರ ಮಹಿಳೆ ಸಾಲು ಮರಗಳ ಪ್ರೀತಿಯ ನಾಡೋಜ ಡಾ ಸಾಲುಮರದ ತಿಮ್ಮಕ್ಕನವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಪರಿಸರ ರಾಯಭಾರಿಯಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅಲ್ಲದೆ ಸಾಲುಮರದ ತಿಮ್ಮಕ್ಕ ಅವರಿಗೆ ರಾಜ್ಯ ಸಂಪುಟ ದರ್ಜೆಯ ಸ್ಥಾನ ಮಾನ ನೀಡಿ ಆದೇಶ ನೀಡಲಾಗಿದೆ.
ರಾಜ್ಯ ಸರಕಾರದ ಈ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸದ್ಯ ಸಾಲುಮರದ ತಿಮ್ಮಕ್ಕ ಅವರು ಬೆಂಗಳೂರಿನ ತುಮಕೂರು ರಸ್ತೆಯ ಸಮೀಪ ವಾಸವಿದ್ದಾರೆ. ಪರಿಸರದ ಬಗ್ಗೆಗಿನ ಇವರ ಕಾಳಜಿಗೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ದೊರಕಿದೆ.