Latestಕ್ರೈಂಬೆಂಗಳೂರು

ಮಹಿಳಾ ಎಸಿಪಿ ಜತೆ ಪೊಲೀಸ್ ಅಧಿಕಾರಿಯ ಲವ್ವಿಡವ್ವಿ..! ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಕೇಸ್..!

692
Pc Cr: Tv 9 kannada
Spread the love

ನ್ಯೂಸ್‌ ನಾಟೌಟ್: ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ, ತಮ್ಮ ಪತಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ತನ್ನ ಪತಿ ಮತ್ತು ಆತನ ಪ್ರೇಯಸಿ ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ದೂರಿದ್ದಾರೆ.

ಇಬ್ಬರು ಪೊಲೀಸ್ ಅಧಿಕಾರಿಗಳ ನಡುವಿನ ಖಾಸಗಿ ಸಂಭಾಷಣೆಯ ಸ್ಕ್ರೀನ್‌ ಶಾಟ್‌ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಆರೋಪಿ ಅಧಿಕಾರಿಯು ದೂರುದಾರ ಮಹಿಳೆಯನ್ನು 2014 ರಲ್ಲಿ ಮದುವೆಯಾಗಿದ್ದು, ಅವರಿಗೆ ಎಂಟು ವರ್ಷದ ಮಗುವಿದೆ. ಪೊಲೀಸ್ ಸೇವೆಗೆ ಸೇರುವ ಮೊದಲು, ಆರೋಪಿ ಅಧಿಕಾರಿ ವೈದ್ಯನಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರಸ್ತುತ ಬೆಂಗಳೂರಿನ ಸೈಬರ್ ಅಪರಾಧ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮಹಿಳಾ ಪೊಲೀಸ್ ಅಧಿಕಾರಿ ಕಾರವಾರ ನಗರದ ಸೈಬರ್ ಅಪರಾಧ ಶಾಖೆಯಲ್ಲಿ ಎಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಗೋವರ್ಧನ್ ಅವರಿಗೆ ಮಹಿಳಾ ಅಧಿಕಾರಿ ಪದೇ ಪದೇ ಕಾಲ್,ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಅವರ ಪತ್ನಿ ಅಮೃತಾ ಪ್ರಶ್ನಿಸಿದ್ದಾರೆ. ಆಗ ಪತ್ನಿಗೆ ಹೊಡೆದು ಟಾರ್ಚರ್ ಮಾಡಿದ್ದಾರೆ. ಅಲ್ಲದೇ ಮಹಿಳಾ ಅಧಿಕಾರಿ ಸಹ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳಾ ಅಧಿಕಾರಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಅವರ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

See also  ಊರುಬೈಲು: ರಬ್ಬರ್ ಗೂಡಿಗೆ ತಗುಲಿದ ಬೆಂಕಿ, ಸಂಪೂರ್ಣ ನಾಶ
  Ad Widget   Ad Widget   Ad Widget