ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಂತೆಯೇ ನೆರೆಯ ಕೊಡಗು ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ ೨ನೇ ಮೊಣ್ಣಂಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಕುಸಿದುಬಿದ್ದಿದೆ.
ಪರಿಣಾಮ ಸಂಚಾರ ವ್ಯವಸ್ಥೆಗೆ ಕೆಲವು ಸಮಯ ತೊಂದರೆಯಾಗಿದೆ. ಸರತಿ ಸಾಲಿನಲ್ಲಿ ವಾಹನಗಳು ಕೆಲವು ಹೊತ್ತು ನಿಲ್ಲಬೇಕಾಯಿತು. ತಕ್ಷಣ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ. ಇನ್ನೂ ಕೂಡ ಗುಡ್ಡದ ಮೇಲಿನ ಮಣ್ಣು ರಸ್ತೆಗೆ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬುಧವಾರ ರಾತ್ರಿ ಮದೆನಾಡಿನ ಸಮೀಪದ ಕರರ್ತೋಜಿ ಎಂಬಲ್ಲಿಯೂ ಭಾರಿ ಗಾತ್ರದ ಮಣ್ಣು ಕುಸಿದು ಬಿದ್ದು ರಸ್ತೆ ಬ್ಲಾಕ್ ಆಗಿತ್ತು.