ನ್ಯೂಸ್ ನಾಟೌಟ್: ಕಾಲೇಜಿನ ಜೂನಿಯರ್ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಅವರ ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ರ‍್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅದೇ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿರುವ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ.
ಬಂಧಿತ ವಿದ್ಯಾರ್ಥಿಗಳನ್ನು ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್, ಕೆ.ಪಿ. ರಾಹುಲ್ ರಾಜ್, ಎನ್.ಎಸ್. ಜೀವಾ, ವಿವೇಕ್ ಎನ್.ಪಿ. ಮತ್ತು ಸಿ. ರಿಜಿಲ್ ಜಿತ್ ಎಂದು ಗುರುತಿಸಲಾಗಿದೆ.
ಈ ಐವರು ಮೊದಲ ವರ್ಷದ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಅವರ ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ರ‍್ಯಾಗಿಂಗ್ ನಡೆಸುತ್ತಿದ್ದರು ಜೊತೆಗೆ ಚೂಪಾದ ವಸ್ತುಗಳಿಂದ ಮೈಮೇಲೆ ಗಾಯಗೊಳಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಗಾಯದ ಮೇಲೆ ಕೆಲವೊಂದು ಕ್ರಿಮ್ ಹಚ್ಚುತ್ತಿದ್ದರು ಇದರಿಂದ ವಿದ್ಯಾರ್ಥಿಗಳು ಕಿರುಚಿದಾಗ ಬಾಯಿಗೆ ಕೂಡ ಕ್ರಿಮ್ ಹಾಕಿ ವಿಕೃತಿ ಮೆರೆಯುತ್ತಿದ್ದರು ಎನ್ನಲಾಗಿದೆ.
ಈ ಕುರಿತು ನೊಂದ ವಿದ್ಯಾರ್ಥಿಗಳು ಕೊಟ್ಟಾಯಂನ ಗಾಂಧಿನಗರ ಪೊಲೀಸರಿಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಮೂರನೇ ವರ್ಷದ ಐವರು ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಈ ಐವರು ವಿದ್ಯಾರ್ಥಿಗಳು ಜೂನಿಯರ್ಸ್ ಗೆ ಕಳೆದ ಮೂರೂ ತಿಂಗಳಿಂದ ಹಿಂಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
Click
ತುಳುನಾಡಿನ ಜಾರಂದಾಯ ನೇಮೋತ್ಸವದಲ್ಲಿ ದೈವದ ಅಭಯ ಪಡೆದ ತಮಿಳು ನಟ ವಿಶಾಲ್, 3 ಗಂಟೆಗಳ ಕಾಲ ನೇಮೋತ್ಸವ ವೀಕ್ಷಿಸಿದ ನಟ
ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ..! ಮೆದುಳಿನಲ್ಲಿ ರಕ್ತಸ್ರಾವ..!
ಮಹಿಳಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ..! ಇಲ್ಲಿದೆ ಸಂಪೂರ್ಣ ಮಾಹಿತಿ
ಉಡುಪಿ: ಮುಸುಕುಧಾರಿಗಳಿಂದ ಕೆನರಾ ಬ್ಯಾಂಕಿನ ಎಟಿಎಂಗೆ ನುಗ್ಗಿ ಕಳವಿಗೆ ಯತ್ನ..! ಸೈರನ್ ಮೊಳಗಿದ ಕಾರಣ ಪರಾರಿ..!