ದೇಶ-ಪ್ರಪಂಚದೇಶ-ವಿದೇಶರಾಜ್ಯವೈರಲ್ ನ್ಯೂಸ್

ರಾತ್ರೋರಾತ್ರಿ ಟ್ರೇನಿಗಳನ್ನು ಹೊರ ಹಾಕಿದ ಇನ್ಫೋಸಿಸ್‌..! ಐಟಿ ಕಂಪನಿಯ ಸಾಮೂಹಿಕ ವಜಾದ ವಿರುದ್ಧ ಆಕ್ರೋಶ..!

ನ್ಯೂಸ್‌ ನಾಟೌಟ್: ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಎಂದು ಮೈಸೂರಿನ ಕ್ಯಾಂಪಸ್‌ ನಲ್ಲಿ ಸುಮಾರು 400 ಟ್ರೇನಿಗಳನ್ನು ಏಕಾಏಕಿ ವಜಾಗೊಳಿಸಿ, ರಾತ್ರೋರಾತ್ರಿ ಹೊರಹಾಕಿದ ಘಟನೆ ಇನ್ಫೋಸಿಸ್ ನಲ್ಲಿ ನಡೆದಿದೆ.

ಕಂಪನಿಯು ಟ್ರೇನಿಗಳನ್ನು ವಜಾಗೊಳಿಸಿದ ದಿನವೇ ಅವರನ್ನು ಬಲವಂತವಾಗಿ ಕ್ಯಾಂಪಸ್ ನಿಂದ ಹೊರಹಾಕಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ. ಇವತ್ತು ಒಂದು ರಾತ್ರಿಯ ಉಳಿದುಕೊಳ್ಳಲು ಅವಕಾಶ ನೀಡಿ ಎಂಬ ಟ್ರೇನಿಗಳ ಮನವಿಯನ್ನು ಕಂಪನಿ ನಿರಾಕರಿಸಿದೆ ಎಂದು ಫೆಬ್ರವರಿ 7 ರಂದು ವಜಾಗೊಂಡ ಟ್ರೇನಿಗಳ ಬಗ್ಗೆ ವರದಿಯಾಗಿದೆ.

ವಜಾಗೊಳಿಸಿದ ಟ್ರೇನಿಗಳಲ್ಲಿ ಒಬ್ಬರಾದ ಮಧ್ಯಪ್ರದೇಶದ ಮಹಿಳೆಯೊಬ್ಬರು “ದಯವಿಟ್ಟು ನನಗೆ ಒಂದು ರಾತ್ರಿ ಉಳಿಯಲು ಅವಕಾಶ ನೀಡಿ, ನಾನು ನಾಳೆ ಹೊರಡುತ್ತೇನೆ. ನಾನು ಈಗ ಎಲ್ಲಿಗೆ ಹೋಗಬೇಕು?” ಎಂದು ಕಣ್ಣೀರು ಹಾಕಿದರೂ ಅಧಿಕಾರಿಗಳು ಕೇಳಲಿಲ್ಲ ಎಂದು ವರದಿ ತಿಳಿಸಿದೆ.

“ನಮಗೆ ಗೊತ್ತಿಲ್ಲ. ನೀವು ಇನ್ನು ಮುಂದೆ ಕಂಪನಿಯ ಭಾಗವಲ್ಲ. ಸಂಜೆ 6 ಗಂಟೆಯೊಳಗೆ ಕ್ಯಾಂಪಸ್ ಖಾಲಿ ಮಾಡಬೇಕು” ಎಂದು ಅಧಿಕಾರಿ ಎಂದು ಆರೋಪಿಸಲಾಗಿದೆ. ಮೌಲ್ಯಮಾಪನ ಪರೀಕ್ಷೆಗಳಲ್ಲಿ ಮೂರು ಬಾರಿ ಅನುತ್ತೀರ್ಣರಾದ ನಂತರ ಟ್ರೇನಿಗಳ ಮೇಲೆ ಕಂಪನಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್‌, “ಸಂಸ್ಥೆಯಲ್ಲಿ ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ನಾವು ಹೊಂದಿದ್ದೇವೆ. ನಮ್ಮ ಮೈಸೂರು ಕ್ಯಾಂಪಸ್‌ ನಲ್ಲಿ ಪ್ರಾಥಮಿಕ ತರಬೇತಿ ಪಡೆದ ನಂತರ ಎಲ್ಲಾ ಹೊಸಬರು ಆಂತರಿಕ ಮೌಲ್ಯಮಾಪನಗಳಲ್ಲಿ ಉತ್ತೀರ್ಣರಾಗಬೇಕು. ಎಲ್ಲಾ ಹೊಸಬರಿಗೆ ಇದರಲ್ಲಿ ಉತ್ತೀರ್ಣರಾಗಲು ಮೂರು ಅವಕಾಶಗಳನ್ನು ನೀಡಲಾಗುತ್ತದೆ. ಇದರಲ್ಲಿ ವಿಫಲವಾದಲ್ಲಿ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಅವರ ಜೊತೆಗಿನ ಒಪ್ಪಂದದಲ್ಲಿಯೂ ಇದನ್ನು ಉಲ್ಲೇಖಿಸಲಾಗಿರುತ್ತದೆ. ಈ ಪ್ರಕ್ರಿಯೆ ಎರಡು ದಶಕಗಳಿಂದಲೂ ಚಾಲ್ತಿಯಲ್ಲಿದೆ. ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರತಿಭೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಹೊಂದಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಖರೀದಿಸಿದ ತಕ್ಷಣ ಶೋರೂಂನ ಎದುರಿನ ಗುಂಡಿಗೆ ಬಿದ್ದ ಕಾರು..! ಆಕೆಗೆ ಡ್ರೈವಿಂಗ್ ಗೊತ್ತಿರಲಿಲ್ಲವೇ..? ಇಲ್ಲಿವೆ ವೈರಲ್ ವಿಡಿಯೋ

ಲೈಂಗಿಕ ವಿಚಾರದಲ್ಲಿ ದಂಪತಿಗಳ ಜಗಳ! ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಿದ ಪತಿ ಆ ನಂತರ ಕೊಂದದ್ದೇಕೆ?

ಪುತ್ತೂರು: ಜಪಾನ್ ಮೂಲದ ವ್ಯಕ್ತಿ ಪೊಲೀಸ್‌ ವಶ, ಗಡಿಯಾರ ಸಮೀಪ ತಿರುಗಾಡುತ್ತಿದ್ದ ಜಪಾನ್‌ ಪ್ರಜೆ