ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ನರಬಲಿ ಕೊಟ್ಟರೆ ನಿನಗೆ ನಿಧಿ ಸಿಗುತ್ತೆ ಎಂದಿದ್ದ ಜ್ಯೋತಿಷಿ..! ಬೈಕಲ್ಲಿ ಡ್ರಾಪ್ ನೀಡುವುದಾಗಿ ಹೇಳಿ ವ್ಯಕ್ತಿಯನ್ನು ಕರೆದೊಯ್ದು ಹತ್ಯೆ..!

ನ್ಯೂಸ್‌ ನಾಟೌಟ್: ನರಬಲಿ ಕೊಟ್ಟರೆ ನಿನಗೆ ನಿಧಿ ಸಿಗುತ್ತೆ ಎಂದು ಜ್ಯೋತಿಷಿ ಹೇಳಿದ್ದ ಎನ್ನಲಾಗಿದೆ. ಜ್ಯೋತಿಷಿ ಮಾತು ನಂಬಿದ ವ್ಯಕ್ತಿ ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜ್ಯೋತಿಷಿ ರಾಮಕೃಷ್ಣನ ಮಾತು ಕೇಳಿ ಪ್ರಭಾಕರ್ ಎಂಬಾತ ನರಬಲಿ ಮಾಡಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಜೆ.ಜೆ ಕಾಲೋನಿ ನಿವಾಸಿ ಪ್ರಭಾಕರ್ ಬರ್ಬರ ಹತ್ಯೆ ಆದ ವ್ಯಕ್ತಿ ಎಂದು ಗುರುತಿಸಲಾಗಿದೆ. ನರಬಲಿ ಕೊಟ್ಟ ಆರೋಪಿ (A1 ) ಆಂಧ್ರದ ಕಲ್ಯಾಣ ದುರ್ಗ ತಾಲೂಕಿನ ಕುಂದುರ್ಪಿ ಗ್ರಾಮದ ಆನಂದ ರೆಡ್ಡಿ. A2 ಜ್ಯೋತಿಷಿ ತುಮಕೂರು ಜಿಲ್ಲೆ ಪಾವಗಡ ತಾಲೂಕು ಕೋಟೆಗುಡ್ಡ ಗ್ರಾಮದ ರಾಮಕೃಷ್ಣ ಎನ್ನಲಾಗಿದೆ.
ಜ್ಯೋತಿಷಿ ರಾಮಕೃಷ್ಣ ಎಂಬಾತ, ಆನಂದ ರೆಡ್ಡಿಗೆ ಪರಶುರಾಮಪುರ ಪಶ್ಚಿಮದಲ್ಲಿ ನರಬಲಿ ಕೊಟ್ರೆ ನಿಧಿ ಸಿಗುತ್ತೆ. ಆ ರಕ್ತವನ್ನು ಮಾರಮ್ಮ ದೇವಿಗೆ ಅರ್ಪಿಸಲು ಹೇಳಿದ್ದನಂತೆ.

ಜ್ಯೋತಿಷಿ ಮಾತು ಕೇಳಿದ ಆನಂದ ರೆಡ್ಡಿ ಕಳೆದ ಭಾನುವಾರ(ಫೆ.9) ಸಂಜೆ ಪಶ್ಚಿಮ‌ ದಿಕ್ಕಲ್ಲಿ ಬಂದ ಪ್ರಭಾಕರನ ಬರ್ಬರ ಹತ್ಯೆ ಮಾಡಿದ್ದಾನೆ. ಬೈಕಲ್ಲಿ ಡ್ರಾಪ್ ನೀಡುವುದಾಗಿ ಹೇಳಿ ಪ್ರಭಾಕರನನ್ನು ಕರೆದೊಯ್ದಿದ್ದಾನೆ.
ಮೃತ ಆನಂದ ರೆಡ್ಡಿ ಪಾವಗಡದ ಡಾಬಾದಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ರಂಜೀತ ಕುಮಾರ್ ಬಂಡಾರು, ASP ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆರೋಪಿಗಳನ್ನು ಬಂಧಿಸಲಾಗಿದೆ.

Click

ಅಕ್ರಮ ಮರುಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾಂಗ್ರೆಸ್​ ಶಾಸಕನ ಪುತ್ರ..! ಅಶ್ಲೀಲವಾಗಿ ಬೈದಿರುವ ವಿಡಿಯೋ ವೈರಲ್

ಶಾಲಾ ಬೀಳ್ಕೊಡುಗೆ ನೆಪದಲ್ಲಿ ಐಷಾರಾಮಿ ಕಾರುಗಳಲ್ಲಿ 12ನೇ ತರಗತಿ ವಿದ್ಯಾರ್ಥಿಗಳ ಸ್ಟಂಟ್..! 26 ಕಾರುಗಳ ಪೈಕಿ 12 ಕಾರುಗಳನ್ನು ವಶಕ್ಕೆ..!

ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿದ್ದ ಅಭಿಮಾನಿ..! ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲಿರುವ ಬಾಲಿವುಡ್ ನಟ

ದಟ್ಟಣೆಯಲ್ಲಿ ರೈಲು ಹತ್ತಲು ಸಾಧ್ಯವಾಗದ್ದಕ್ಕೆ ಎಸಿ ಬೋಗಿಗಳನ್ನು ಧ್ವಂಸಗೊಳಿಸಿದ ಜನ..! ಇಲ್ಲಿದೆ ವೈರಲ್ ವಿಡಿಯೋ

ಬಿಜೆಪಿಯಿಂದ ದೆಹಲಿ ಗದ್ದುಗೆಗೆ ಮಹಿಳಾ ಮುಖ್ಯಮಂತ್ರಿ..! 2 ಉಪಮುಖ್ಯಮಂತ್ರಿ ಹುದ್ದೆ..?

Related posts

ಜೀಪ್‌-ಟ್ರಕ್‌ ಭೀಕರ ಅಪಘಾತ; ಒಂದೇ ಕುಟುಂಬದ ಹತ್ತು ಮಂದಿ ಸಾವು!

ಒಡಿಶಾ ಆರೋಗ್ಯ ಸಚಿವರ ಎದೆಗೆ ಗುಂಡಿಟ್ಟ ದು‍ಷ್ಕರ್ಮಿಗಳು ! ಸಚಿವರ ಸ್ಥಿತಿ ಗಂಭೀರ – ವಿಡಿಯೋ ನೋಡಿ

ಏನಿದು ಹಾಸನಾಂಬೆಯ ಪವಾಡ..! ಕೇವಲ 12 ದಿನದಲ್ಲಿ ಎಷ್ಟು ಕೋಟಿ ಗಳಿಕೆ ಗೊತ್ತಾ..?