ನ್ಯೂಸ್ ನಾಟೌಟ್: ಸುಂದರಬನ್ಸ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹುಲಿ ದಾಳಿ ನಡೆಸಿದ ಘಟನೆ ನಡೆದಿದೆ. ಹುಲಿ ದಾಳಿಗೊಳಗಾದ ಅರಣ್ಯ ಇಲಾಖೆ ನೌಕರನನ್ನು ತಕ್ಷಣ ಸಹೋದ್ಯೋಗಿಗಳು ರಕ್ಷಿಸಿದ್ದಾರೆ.
ಸುಂದರಬನ್ಸ್ ಅಭಯಾರಣ್ಯದಲ್ಲಿ ಸೋಮವಾರ(ಫೆ.10) ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಅಜ್ಮಲ್ಮರಿ ಅರಣ್ಯಕ್ಕೆ ಅಟ್ಟಲು ಯತ್ನಿಸುತ್ತಿದ್ದರು. ಈ ವೇಳೆ ನೌಕರನ ಮೇಲೆ ಹುಲಿ ದಾಳಿ ಮಾಡಿದೆ.
ಎಂಟರಿಂದ ಹತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಮತ್ತೆ ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ ಹುಲಿ ಸಿಬ್ಬಂದಿ ಕಡೆಗೆ ಬಂದಿದೆ. ಈ ವೇಳೆ ಅವರು ಕಿರುಚಿದ್ದಾರೆ. ಈ ವೇಳೆ ಹುಲಿ ಒಬ್ಬರ ಮೇಲೆ ಎರಗಿದೆ. ಅಷ್ಟರಲ್ಲೇ ಅಲ್ಲೇ ಇದ್ದ ಸಹೋದ್ಯೋಗಿಗಳು ಕೋಲುಗಳಿಂದ ಹುಲಿಗೆ ಬಡಿದಿದ್ದಾರೆ. ಈ ವೇಳೆ ಹುಲಿ ಆ ವ್ಯಕ್ತಿಯನ್ನು ಬಿಟ್ಟು ಕಾಡಿಗೆ ಓಡಿಹೋಗಿದೆ.
ದೇಹದ ಮೇಲೆ ಹಲವಾರು ಗಾಯಗಳಾಗಿವೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದರೆ, ನಾವು ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ಸ್ಥಳಾಂತರಿಸುತ್ತೇವೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಹೊರತುಪಡಿಸಿ ಮತ್ಯಾರಿಗೂ ಗಾಯಗಳಾಗಿಲ್ಲ ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ನಿಶಾ ಗೋಸ್ವಾಮಿ ತಿಳಿಸಿದ್ದಾರೆ.
Click
ಕುಂಭಮೇಳಕ್ಕೆ ಬಂದ ನಾಗ ಸಾಧುಗಳು ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ್ರಾ..? ಇಲ್ಲಿದೆ ವೈರಲ್ ವಿಡಿಯೋ
ಕೊಡಗಿನ ಕಾಫಿ ಎಸ್ಟೇಟ್ ನಲ್ಲಿ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ..! ಮಂಗಳೂರಿನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ