ಕರಾವಳಿಕೊಡಗುಮಂಗಳೂರುಮಹಿಳೆ-ಆರೋಗ್ಯ

ಕೊಡಗಿನ ಕಾಫಿ ಎಸ್ಟೇಟ್ ನಲ್ಲಿ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ..! ಮಂಗಳೂರಿನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

576
Pc Cr: Vartha bharati

ನ್ಯೂಸ್‌ ನಾಟೌಟ್: 12 ವರ್ಷದ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನಗರಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವ ಮೂಲಕ ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಸ್ಸಾಂ ಮೂಲದ ಬಾಲಕ ಕಮಲ್ ಹಸನ್(12) ಎಂದು ಗುರುತಿಸಲಾಗಿದೆ.
ಬಾಲಕ ಕಮಲ್ ಹಸನ್ ಹೆತ್ತವರು ಕೊಡಗು ಜಿಲ್ಲೆಯ ಕಾಫಿ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ(ಫೆ.8) ಸಂಜೆಯ ಹೊತ್ತಿಗೆ ಮನೆ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಬಾಲಕನು ಕತ್ತರಿಸಲ್ಪಟ್ಟ ತೆಂಗಿನ ಗರಿಯ ಮೇಲೆ ಬಿದ್ದ ರಬಸಕ್ಕೆ ತೆಂಗಿನ ಗರಿಯು ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಪೀಲ್ ಚೈನ್‌ ನೊಂದಿಗೆ ಎದೆಯ ಒಳಗಡೆಗೆ ಹೊಕ್ಕಿತ್ತು ಎನ್ನಲಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಪ್ರಾಥಮಿಕ ಚಿಕಿತ್ಸೆ ಮೂಲಕ ಮಂಗಳೂರಿನ ವೆನ್‌ ಲಾಕ್ ಆಸ್ಪತ್ರೆಗೆ ಕರೆ ತರಲಾಗಿತ್ತು.

ಮಧ್ಯರಾತ್ರಿ ಹೊತ್ತಿಗೆ ಮಂಗಳೂರಿನ ವೆನ್‌ ಲಾಕ್ ಆಸ್ಪತ್ರೆಗೆ ಬಾಲಕ ಕಮಲ್ ಹಸನ್‌ ನನ್ನು ದಾಖಲಿಸಲಾಗಿತ್ತು. ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಸುರೇಶ್ ಪೈ ನೇತೃತ್ವದ ತಂಡವು ರಾತ್ರಿ 1:30 ರಿಂದ 3:30ರ ತನಕ ಶಸ್ತ್ರ ಚಿಕಿತ್ಸೆ ನಡೆಸಿ ಬಾಲಕನ ಕುತ್ತಿಗೆಯಿಂದ ಕೆಳ ಭಾಗಕ್ಕೆ ಸುಮಾರು 20 ಸೆ.ಮೀನಷ್ಟು ಕೆಳಕ್ಕೆ ಇಳಿದಿದ್ದ ತೆಂಗಿನ ಗರಿ ಮತ್ತು ಸ್ಟೀಲ್ ಚೈನ್‌ ನನ್ನು ಹೊರತೆಗೆದಿದ್ದಾರೆ. ಬಾಲಕ ಇದೀಗ ಈಗ ಐಸಿಯುನಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

Click

ವೇದಿಕೆಯಲ್ಲಿ ಕುಣಿಯುತ್ತಿದ್ದ ಯುವತಿ ಕುಸಿದುಬಿದ್ದು ಸಾವು..! ಆಕೆಯ ಸಹೋದರಿಯೂ 12ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಳು..! ಇಲ್ಲಿದೆ ವೈರಲ್ ವಿಡಿಯೋ

See also  ಭಾರಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಫ್ಲೆಕ್ಸ್‌..! 11 ದ್ವಿಚಕ್ರ ವಾಹನಗಳು ಪುಡಿ..ಪುಡಿ
  Ad Widget   Ad Widget   Ad Widget   Ad Widget   Ad Widget   Ad Widget