ಕ್ರೀಡೆಕ್ರೀಡೆ/ಸಿನಿಮಾಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

‌ಪಾಕ್‌ ಮೈದಾನದಲ್ಲಿ ಬೆಂಗಳೂರು ಮೂಲದ ಸ್ಟಾರ್‌ ಆಟಗಾರನ ಹಣೆಗೆ ಬಡಿದ ಚೆಂಡು..! ರಕ್ತ ಸೋರುತ್ತಲೇ ಹೊರನಡೆದ ರಚಿನ್‌ ರವೀಂದ್ರ..!

ನ್ಯೂಸ್ ನಾಟೌಟ್: ಇದೇ ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿರುವ ಲಾಹೋರ್‌ ನ ಗಡಾಫಿ ಕ್ರೀಡಾಂಗಣದಲ್ಲಿ ಕಿವೀಸ್‌ ಸ್ಟಾರ್‌ ಆಟಗಾರ ಬೆಂಗಳೂರು ಮೂಲದ ರಚಿನ್‌ ರವೀಂದ್ರ (Rachin Ravindra) ಹಣೆಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ವ್ಯವಸ್ಥೆ ಎಲ್ಲವೂ ಸರಿಯಾಗಿದೆಯೆಂದು ಜಗತ್ತಿನೆದುರು ಖಾತ್ರಿ ಪಡಿಸಲು ನ್ಯೂಜಿಲೆಂಡ್ (New Zealand), ದಕ್ಷಿಣ ಆಫ್ರಿಕಾ ತಂಡದೊಂದಿಗೆ ತ್ರಿಕೋನ ಸರಣಿ ಏರ್ಪಡಿಸಿದೆ. ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಪಟ್ಟು ಹಿಡಿದು ತನ್ನ ಪಂದ್ಯಗಳನ್ನು ದುಬೈಗೆ ಸ್ಥಳಾಂತರ ಮಾಡಿಸಿಕೊಂಡ ಭಾರತಕ್ಕೆ ಛಾಟಿಯೇಟು ನೀಡುವ ಉದ್ದೇಶವೂ ಈ ಗಡಿಬಿಡಿಯ ಟೂರ್ನಿಯಲ್ಲಿ ಇತ್ತು ಎಂಬುದು ಸ್ಪಷ್ಟ ಎನ್ನಲಾಗಿದೆ. ಆದ್ರೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗಲೇ ಆ ಘಟನೆ ನಡೆದು ಹೋಗಿದೆ.

ಪಾಕಿಸ್ತಾನದ ಇನ್ನಿಂಗ್ಸ್‌ ನ 38ನೇ ಓವರ್ ನಲ್ಲಿ ರಚಿನ್ ರವೀಂದ್ರ ಸ್ಕ್ವೇರ್‌ ಲೆಗ್‌ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಪಾಕಿಸ್ತಾನದ ಖುಷ್ದಿಲ್ ಶಾ ಹೊಡೆದ ಸ್ವೀಪ್ ಶಾಟ್ ನೇರವಾಗಿ ರಚಿನ್ ರವೀಂದ್ರ ಅವರ ಕಡೆಗೆ ಹೋಗಿತ್ತು. ಕ್ಯಾಚ್‌ ಅಗಿ ಕೈಸೇರಬೇಕಾದ ಚೆಂಡು ನೇರವಾಗಿ ಹೋಗಿ ರಚಿನ್ ರವೀಂದ್ರ ಅವರ ಹಣೆವಗೆ ಬಡಿಯಿತು. ಅವರಿಗೆ ಚೆಂಡು ಬಂದ ದಾರಿಯನ್ನು ಕೊಂಚವೂ ಅಂದಾಜಿಸಲು ಸಾಧ್ಯವಾಗಿಲ್ಲ. ಚೆಂಡು ಹಣೆಗೆ ಬಡಿಯುತ್ತಿದ್ದಂತೆ ಅಲ್ಲಿಯೇ ರಚಿನ್‌ ಕುಸಿದು ಬಿದ್ದಿದ್ದಾರೆ. ಏನಾಗುತ್ತಿದೆ ಎಂದು ಎಲ್ಲರೂ ಗಾಬರಿಯಾಗಬೇಕಾದರೆ ಅವರ ಮುಖದಿಂದ ರಕ್ತ ಸೋರುತ್ತಿತ್ತು. ತಕ್ಷಣವೇ ಮೈದಾನಕ್ಕೆ ಆಗಮಿಸಿದ ನ್ಯೂಜಿಲೆಂಡ್ ತಂಡದ ಫಿಸಿಯೋ ಮತ್ತು ಮೈದಾನದಲ್ಲಿದ್ದ ರಕ್ಷಣಾ ಸಿಬ್ಬಂದಿ ಅವರ ಮುಖವನ್ನು ಟವೆಲ್‌ ನಿಂದ ಮುಚ್ಚಿಕೊಂಡು ಮೈದಾನದಿಂದ ಹೊರ ನಡೆದರು ಎನ್ನಲಾಗಿದೆ.

Click

ಕುಟುಂಬ ಸಮೇತರಾಗಿ ಮಹಾ ಕುಂಭಮೇಳಕ್ಕೆ ತೆರಳಿದ ಡಿಕೆಶಿ, ಮುಂಜಾನೆ ಪ್ರಯಾಗ್‌ ರಾಜ್‌ ಕಡೆ ಪ್ರಯಾಣ

ಪುತ್ತೂರಿನ ಯುವಕ ಆವಿಷ್ಕರಿಸಿದ ಡ್ರೋನ್‌ ಸೇನೆ ಆಯ್ಕೆ..! ಮೆಷಿನ್‌ ಗನ್‌ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ..!

ಕಾರ್ಯಕರ್ತ ಅಸ್ವಸ್ಥಗೊಳ್ಳುತ್ತಿದ್ದಂತೆ ಭಾಷಣ ನಿಲ್ಲಿಸಿ ನೆರವಿಗೆ ಸೂಚಿಸಿದ ಮೋದಿ..! ಇಲ್ಲಿದೆ ವಿಡಿಯೋ

Related posts

ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಶಿಖರ್‌ ಧವನ್‌..! ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಟೀಂ ಇಂಡಿಯಾದ ಆಟಗಾರ

ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ ಪ್ರಕರಣ, ಚಿಕಿತ್ಸೆ ಫಲಕಾರಿಯಾಗದೆ ಓರ್ವ ಬಾಲಕ ಮೃತ್ಯು..ಕಣ್ಣೀರಲ್ಲಿ ಕುಟುಂಬ

ಕೊರಗಜ್ಜನ ಕವಿತೆಗಳಲ್ಲಿ ಆಕ್ಷೇಪಾರ್ಹ ಪದ ಬಳಕೆ, ಜಾಲತಾಣಗಳಲ್ಲಿ ಕುಹಕವಾಡುತ್ತಿರುವವರು ಯಾರು..?