ನ್ಯೂಸ್ ನಾಟೌಟ್: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mela) ಇಂದು(ಫೆ.9) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕುಟುಂಬ ಸಮೇತರಾಗಿ ತೆರಳಿದ್ದಾರೆ.
ಮುಂಜಾನೆ 5:30ಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಕುಟುಂಬದೊಂದಿಗೆ ಡಿಕೆಶಿ ತೆರಳಿದ್ದಾರೆ. ಕುಂಭಮೇಳಕ್ಕೆ ಹೋಗುವ ಮುನ್ನ ಸದಾಶಿವ ನಗರದ ಮನೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಧರ್ಮದ ನಂಬಿಕೆಯಿಂದ ಇವತ್ತು ಕುಂಭಮೇಳಕ್ಕೆ ಹೋಗುತ್ತಿದ್ದೇನೆ ಎಂದರು.
ಕರ್ನಾಟಕದಲ್ಲಿ ಡಿಸಿ, ಎಸ್ಪಿ ಸೇರಿ ಮೈಸೂರಿನವರು ಬಂದಿದ್ದರು. ಸ್ವಾಮಿಗಳ ಜೊತೆ ಎಲ್ಲಾ ಮಾತನಾಡಿದ್ದೇವೆ. ಅವರು ಎಲ್ಲಾ ಬರುತ್ತಿದ್ದಾರೆ. ನಮ್ಮ ಕರ್ನಾಟದ ಕಾವೇರಿ ಕುಂಭಮೇಳದಲ್ಲಿಯೂ ಕೂಡ ಭಾಗಿಯಾಗುತ್ತೇನೆ ಎಂದು ತಿಳಿಸಿದರು.