ನ್ಯೂಸ್ ನಾಟೌಟ್:ಕೊಡಗು ಜಿಲ್ಲೆಯಲ್ಲಿ ಕೊಡವರ ಸಂಸ್ಕೃತಿ ಉಳಿವಿಗೆ 20000ಕ್ಕೂ ಅಧಿಕ ಕೊಡವರು ಪಾದಯಾತ್ರೆ ಮಾಡಿರೋದು ವಿಶೇಷ. ʼಕೊಡವಾಮೆ ಬಾಳುʼ ಹೆಸರಿನಲ್ಲಿ ಪಾದಯಾತ್ರೆ ನಡೆದಿದ್ದು,ನಟಿ ಹರ್ಷಿಕಾ ಪೂಣಚ್ಛ, ಭುವನ್ ಪೊನ್ನಣ್ಣ ಅವರು ಈ ಜಾತ್ರೆಗೆ ಸಾಥ್ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಭುವನ್ ಪೊನ್ನಣ್ಣ “ ನಾನು ಇದುವರೆಗೂ ಈ ರೀತಿ ಪಾದಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ. ಎಲ್ಲರೂ ಕೊಡವ ವೇಷಭೂಷಣದಲ್ಲಿ ಈ ರೀತಿ ಪಾದಯಾತ್ರೆಯಲ್ಲಿ ಭಾಗವಹಿಸಿರೋದನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ಇದೊಂದು ಐತಿಹಾಸಿಕ ಕ್ಷಣ. ಇದು ಒಗ್ಗಟ್ಟಿನ ಪ್ರತೀಕ.ಕೊಡವ ಜನತೆಯಲ್ಲಿ ಒಗ್ಗಟ್ಟು ಇಲ್ಲ ಎಂಬ ದೂರು ಇತ್ತು. ಆದರೆ ಇಂದು ಸೇರಿರುವ ಜನತೆ ನೋಡಿದರೆ ಒಗ್ಗಟ್ಟು ಎದ್ದು ಕಾಣುತ್ತಿದೆ ಎಂದಿದ್ದಾರೆ.
ಬಳಿಕ ನಟಿ ಹರ್ಷಿಕಾ ಪೂಣಚ್ಛ ಮಾತನಾಡಿ “ ನಾನು ನನ್ನ ಮೂರುವರೆ ತಿಂಗಳು ಮಗುವನ್ನು ಕಾರ್‌ನಲ್ಲಿ ಬಿಟ್ಟು ಬಂದಿದ್ದೇನೆ. ಈ ಬಿಸಿಲಿನಲ್ಲಿ ಕುಟ್ಟದಿಂದ ಮಡಿಕೇರಿಯವರೆಗೆ ಬರೋದು ಸಣ್ಣ ಮಾತಲ್ಲ. ನಾನು ಕೊಡಗಿನ ಹುಡುಗಿ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.