ಚಿಕ್ಕಮಗಳೂರು

ಹಬ್ಬದ ಊಟಕ್ಕೆಂದು ಬಂದು ಬಾವಿಗೆ ಬಿದ್ದರು!! 20 ಅಡಿ ಆಳದ ಬಾವಿಯಲ್ಲಿ ಇಡೀ ರಾತ್ರಿಯನ್ನೇ ಕಳೆದ ಮಹಿಳೆ!!

ನ್ಯೂಸ್‌ ನಾಟೌಟ್‌ : ಮಹಿಳೆಯೊಬ್ಬರು ಹಬ್ಬದ ಊಟಕ್ಕೆಂದು ಬಂದು ೨೦ ಅಡಿ ಆಳದ ಬಾವಿಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡಗಾ ಗ್ರಾಮದಲ್ಲಿ ನಡೆದಿದೆ. ಸುಮಾರು 40 ವರ್ಷದ ಮಹಿಳೆ ಆಕಸ್ಮಿಕವಾಗಿ ತಡೆಗೋಡೆ ಇಲ್ಲದ ಬಾವಿಗೆ ಬಿದ್ದು ರಾತ್ರಿಯಿಡಿ ನರಳಾಡಿದ್ದು, ತೀವ್ರ ಗಾಯಗೊಂಡಿದ್ದಾರೆ.

ಹೊಳಕೆರೆ ತಾಲೂಕಿನ ಚಿಕ್ಕಜಾಜೂರಿನ ತಿಮ್ಮಕ್ಕ (40) ತಡಗಾ ಗ್ರಾಮದ ಸಂಬಂಧಿಕರ ಮನೆಗೆ ಹಬ್ಬದ ಊಟಕ್ಕೆ ಬಂದಿದ್ದರು. ರಾತ್ರಿ ವೇಳೆ ಆಕಸ್ಮಿಕವಾಗಿ ಕಾಲುಜಾರಿ ತಡೆಗೋಡೆ ಇಲ್ಲದ ಬಾವಿಗೆ ಬಿದ್ದಿದ್ದಾರೆ.ಆದರೆ ರಾತ್ರಿಯಿಡೀ ಸಹಾಯಕ್ಕಾಗಿ ಅಳುತ್ತಿದ್ದರು. ಆದರೂ ಯಾರೂ ಅವರನ್ನು ಗಮನಿಸದೇ ಹೋಗಿದ್ದು ವಿಪರ್ಯಾಸ!!

ಒಂದು ರಾತ್ರಿ ಬಾವಿಯಲ್ಲೇ ಕಳೆದ ಮಹಿಳೆ ಮತ್ತೆ ಮರುದಿನ ಕಿರುಚಾಡಿದ್ದಾರೆ. ಅದೃಷ್ಟಕ್ಕೆ ಗ್ರಾಮಸ್ಥರು ಅವರನ್ನು ಗಮನಿಸಿದ್ದ ಮಹಿಳೆಯನ್ನು ಪತ್ತೆ ಮಾಡಿದ್ದಾರೆ. ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಬಂದ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ. ಮಹಿಳೆ ಸದ್ಯ ಆರೋಗ್ಯದಿಂದ ಇದ್ದಾರೆ.

Related posts

ಶೋಭಾ ಕರಂದ್ಲಾಜೆಗೆ ಲೋಕಸಭೆ ಟಿಕೆಟ್​ ಖಚಿತ..? ಶೋಭಾ ಪರ ನಿಂತ ಬಿಎಸ್ ​ವೈ ಹೇಳಿದ್ದೇನು..?

ಕೆಎಸ್‌ಆರ್‌ಟಿಸಿ ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ..!,ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದ ಚಾಲಕ..

ಟ್ರಕ್ಕಿಂಗ್‌ ವೇಳೆ ಯುವಕ ನಾಪತ್ತೆ; ಗುಡ್ಡದ ತುದಿಯಲ್ಲಿ ಸಾಕ್ಷಿ ನುಡಿಯಿತು ಟೀ ಶರ್ಟ್ , ಮೊಬೈಲ್,ಸ್ಲಿಪ್ಪರ್ ..!