ನ್ಯೂಸ್ ನಾಟೌಟ್: ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಉದ್ಯೋಗಿಯೋರ್ವ ತನಗೆ ರಜೆ ನೀಡಲು ನಿರಾಕರಿಸಿದ್ದಕ್ಕೆ ನಾಲ್ವರು ಸಹೋದ್ಯೋಗಿಗಳಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡವರನ್ನು ಜಯದೇಬ್ ಚಕ್ರವರ್ತಿ, ಸಂತುನು ಸಹಾ, ಸಾರ್ಥ ಮತ್ತು ಶೇಖ್ ಸತಾಬುಲ್ ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯನ್ನು ಅಮಿತ್ ಕುಮಾರ್ ಸರ್ಕಾರ್ ಎಂದು ಗುರುತಿಸಲಾಗಿದ್ದು, ಕೋಲ್ಕತ್ತಾದ ನ್ಯೂಟೌನ್ ಪ್ರದೇಶದ ಕರಿಗರಿ ಭವನದ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಈತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸರ್ಕಾರ್ ತನ್ನ ಸಹೋದ್ಯೋಗಿಗಳಿಗೆ ಚೂರಿಯಿಂದ ಇರಿದು ಬಳಿಕ ಅದೇ ಚೂರಿ ಹಿಡಿದು ನಗರದಾದ್ಯಂತ ನಡೆದಾಡಿದ್ದಾನೆ ಎನ್ನಲಾಗಿದೆ.
ಅಮಿತ್ ಕುಮಾರ್ ಸರ್ಕಾರ್ ಬೆನ್ನಿನ ಮೇಲೆ ಒಂದು ಚೀಲ, ಎಡಗೈಯ್ಯಲ್ಲಿ ಮತ್ತೊಂದು ಕೈ ಚೀಲ ಹಿಡಿದುಕೊಂಡಿದ್ದು, ಬಲಗೈಯ್ಯಲ್ಲಿ ರಕ್ತ ಸಿಕ್ತವಾದ ಚೂರಿಯನ್ನು ಹಿಡಿದುಕೊಂಡು ಸಾರ್ವಜನಿಕ ರಸ್ತೆಯಲ್ಲಿ ನಡೆದಾಡಿದ್ದಾನೆ. ಕೆಲವು ದಾರಿಹೋಕರು ಈ ವೇಳೆ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವೇಳೆ ತನ್ನ ಬಳಿಗೆ ಬರದಂತೆ ಆರೋಪಿಯು ದಾರಿಹೋಕರಿಗೆ ಬೆದರಿಸಿದ್ದಾನೆ.
ʼಉತ್ತರ 24 ಪರಗಣ ಜಿಲ್ಲೆಯ ಸೋದೆಪುರದ ಘೋಲಾ ನಿವಾಸಿಯಾದ ಅಮಿತ್ ಕುಮಾರ್ ಸರ್ಕಾರ್ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಎಷ್ಟೇ ಕೇಳಿದರೂ ಸರಿಯಾಗಿ ರಜೆ ಕೊಟ್ಟಿಲ್ಲ ಎಂದು ಸಹೋದ್ಯೋಗಿಗಳೊಂದಿಗೆ ಜಗಳವಾಡಿ ಬಳಿಕ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆʼ ಎಂದು ಪೊಲೀಸರು ತಿಳಿಸಿದ್ದಾರೆ.
Click
ಮಗನ ಮೃತದೇಹ ಬೇಡವೆಂದು ಊರಿಗೆ ಹೊರಟ ತಾಯಿ..! ಕೇರಳದ ಕುಖ್ಯಾತ ಕಳ್ಳನ ಮೃತದೇಹ ಬೆಂಗಳೂರಿನಲ್ಲಿ ಪತ್ತೆ..!
ಎಷ್ಟೇ ಹೇಳಿದ್ರೂ ಆಕೆಯ ಸಹವಾಸ ಬಿಡದ ಪತಿ..! ಪತಿಯ ಕಾಲು ಮುರಿಯಲು 5 ಲಕ್ಷ ರೂ.ಗೆ ಸುಪಾರಿ ನೀಡಿದ ಪತ್ನಿ..!
‘ಎಟರ್ನಲ್’ ಎಂದು ಹೆಸರು ಬದಲಿಸಿಕೊಂಡ Zomato..! ಹೊಸ ಸೇವೆಗಳು ಸೇರ್ಪಡೆ..!