ಕ್ರೈಂವೈರಲ್ ನ್ಯೂಸ್ಸಿನಿಮಾ

ಬಾಲಿವುಡ್ ನಟ ಸೋನು ಸೂದ್ ಗೆ ಬಂಧನ ವಾರೆಂಟ್..! ಏನಿದು ಪ್ರಕರಣ..?

ನ್ಯೂಸ್ ನಾಟೌಟ್: ವಂಚನೆ ಪ್ರಕರಣವೊಂದರಲ್ಲಿ ಬಾಲಿವುಡ್ ನಟ ಸೋನು ಸೂದ್ ಗೆ ಪಂಜಾಬ್ ನ ಲುಧಿಯಾನಾ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಲುಧಿಯಾನಾ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ವಾರೆಂಟ್ ಜಾರಿಗೊಳಿಸಿದ್ದಾರೆ.

ಸುಮಾರು 10 ಲಕ್ಷ ರೂಪಾಯಿ ವಂಚನೆ ಆರೋಪಿಸಿ ಲೂಧಿಯಾನಾದ ವಕೀಲ ರಾಜೇಶ್ ಖನ್ನಾ ಎಂಬವರು ಪ್ರಕರಣ ದಾಖಲಿಸಿದ್ದರು.ಪ್ರಕರಣದ ಪ್ರಮುಖ ಆರೋಪಿ ಮೋಹಿತ್ ಶುಕ್ಲಾ ನಕಲಿ ರಿಜಿಕಾ ಕಾಯಿನ್ ನಲ್ಲಿ ಹೂಡಿಕೆ ಮಾಡುವ ಆಮಿಷ ತೋರಿಸಿ ವಂಚಿಸಿದ್ದರು ಎಂದು ಆಪಾದಿಸಲಾಗಿತ್ತು. ಈ ಪ್ರಕರಣ ರಿಯಲ್ ಎಸ್ಟೇಟ್ ವಹಿವಾಟಿಗೆ ಸಂಬಂಧಿಸಿದ ವಂಚನೆ ಆರೋಪಗಳನ್ನು ಸಂಬಂಧಿಸಿದೆ. ದೂರುದಾರರು ಸೋನು ಸೂದ್ ವಿರುದ್ಧ ಒಪ್ಪಂದ ಉಲ್ಲಂಘನೆ ಮತ್ತು ಆರ್ಥಿಕ ದುರುಪಯೋಗದ ಆರೋಪ ಹೊರಿಸಿದ್ದಾರೆ.

ಈ ಕಾರಣಕ್ಕೆ ಪ್ರಮುಖ ಸಾಕ್ಷಿ ನುಡಿಯಲು ಕೋರ್ಟ್, ಸೋನು ಸೂದ್ ಗೆ ಸಮನ್ಸ್ ನೀಡಿತ್ತು. ಆದರೆ ಪ್ರತಿ ಬಾರಿಯೂ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಲೂಧಿಯಾನಾ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ರಮಣ್ಪ್ರೀತ್ ಕೌರ್ ವಾರೆಂಟ್ ಜಾರಿಗೊಳಿಸಿದ್ದರು.

ಸೋನು ಸೂದ್ ಅವರನ್ನು ಬಂಧಿಸಿ ಹಾಜರುಪಡಿಸುವಂತೆ ಮುಂಬೈನ ಅಂಧೇರಿ ಪಶ್ಚಿಮದ ಓಶಿವಾರಾ ಪೊಲೀಸ್ ಠಾಣಾಧಿಕಾರಿಯವರಿಗೆ ಕೋರ್ಟ್ ನಿರ್ದೇಶನ ನೀಡಿದೆ.

ಕಾಸಾಬ್ಲಾಂಕಾ ಅಪಾರ್ಟ್ಮೆಂಟ್ ನ ಮನೆಸಂಖ್ಯೆ 605/606ರ ನಿವಾಸಿ ಸೋನು ಸೂದ್ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ (ಸಮನ್ಸ್ ಗಳನ್ನು ಪಡೆಯಲು ತಪ್ಪಿಸಿಕೊಂಡಿದ್ದರಿಂದ ಅಥವಾ ಹಾಜರಾಗಲು ವಿಫಲರಾಗಿದ್ದರಿಂದ) ಸಮನ್ಸ್ ನೀಡಲಾಗುತ್ತಿದೆ. ಸೋನು ಸೂದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಈ ಮೂಲಕ ಆದೇಶಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

Related posts

ಶೋಭಕ್ಕನ ಹಾವು ಹಿಡಿದ ಸಾಹಸಮಯ ವಿಡಿಯೋ ವೈರಲ್, ಯಾರಿವರು ಶೋಭಕ್ಕ..? ಕೊನೆಗೂ ಸಿಕ್ಕಿತು ಉತ್ತರ

ಅವಶೇಷಗಳಡಿ ಲಕ್ಷಕ್ಕೂ ಅಧಿಕ ಮೃತದೇಹಗಳಿರುವ ಸಾಧ್ಯತೆ!

‘ಬ್ರೈನ್‌ ಡೆಡ್‌’ ಆಗಿದ್ದ ವ್ಯಕ್ತಿಯ ಹೃದಯ ದಾನ ಮಾಡಲು ಆಪರೇಷನ್ ಮಾಡುತ್ತಿದ್ದ ವೇಳೆ ಎದ್ದು ಕುಳಿತ ರೋಗಿ..! ಎನಿದು ವೈದ್ಯಕೀಯ ಲೋಕದ ವಿಸ್ಮಯ..! ಇಲ್ಲಿದೆ ವಿಡಿಯೋ