ಕೆವಿಜಿ ಕ್ಯಾಂಪಸ್‌

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ವಿಶೇಷ ಜಾಗೃತಿ ಕಾರ್ಯಕ್ರಮ “ಯುನೈಟೆಡ್ ಬೈ ಯುನಿಕ್ “

ನ್ಯೂಸ್ ನಾಟೌಟ್: ಜಗತ್ತನ್ನು ಕಾಡುತ್ತಿರುವ ಮಾರಕ ರೋಗ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆ. 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುವುದು. ವಿಶ್ವ ಕ್ಯಾನ್ಸರ್ ದಿನ 2025ರ ಧ್ಯೇಯವಾಕ್ಯ “ಯುನೈಟೆಡ್ ಬೈ ಯುನಿಕ್ “ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜನರಲ್ ಸರ್ಜರಿ ವಿಭಾಗದ ವತಿಯಿಂದ ಕ್ಯಾನ್ಸರ್ ದಿನದ ಕುರಿತಾದ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ವಹಿಸಿ ಮಾತನಾಡಿ, ಕ್ಯಾನ್ಸರ್ ಕುರಿತಾದ ಉಪಯುಕ್ತ ಮಾಹಿತಿ ಹಂಚಿಕೊಂಡರು. ವೇದಿಕೆಯಲ್ಲಿ ಕಾಲೇಜಿನ ಡೀನ್ ಡಾ| ನೀಲಾಂಬಿಕೈ ನಟರಾಜಾನ್, ಜನರಲ್ ಸರ್ಜರಿ ವಿಭಾಗ ಮುಖ್ಯಸ್ಥ ಡಾ| ಗೋಪಿನಾಥ್ ಪೈ, ಅಸೋಸಿಯೇಟ್ ಪ್ರೊಫೆಸರ್ ಡಾ| ರಂಜಿತ್ ಕೆ.ಬಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನುರಿತ ವೈದ್ಯರು ಕ್ಯಾನ್ಸರ್ ಕುರಿತಾದ ಹಲವಾರು ಉಪಯುಕ್ತ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಕ್ಯಾನ್ಸರ್ ಕುರಿತಾದ ಕಿರು ಪ್ರಹಸನ ನಡೆಯಿತು.

Related posts

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಪ್ರಥಮ ಬಿ.ಎ.ಎಂ.ಎಸ್ ವಿದ್ಯಾರ್ಥಿಗಳ ಫ್ರೆಶರ್ಸ್ ಡೇ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಸಾಹಿತ್ಯಿಕ ಸ್ಪರ್ಧೆ ಸುಕೃತಾ-2024

ಕೆವಿಜಿ ಸಮಾಜ ಸೇವಾ ಸಂಘ (ರಿ.) ಸುಳ್ಯ ವತಿಯಿಂದ ಡಾ ಕೆವಿಜಿ ಯವರ 96ನೇ ಜಯಂತ್ಯೋತ್ಸವ ಆಚರಣೆ, ಕೃಷಿ ಕಾರ್ಯದಲ್ಲಿ ಅಪಘಾತಗೊಂಡು ದೈಹಿಕ ಶಕ್ತಿಯನ್ನು ಕಳೆದುಕೊಂಡ ಯುವಕರಿಗೆ ಸಹಾಯಧನ