ಕ್ರೈಂ

ಮೊಬೈಲ್‌ನಲ್ಲಿ ಒಂದನ್ನು ಒತ್ತಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ..!:ಏನಿದು ಘಟನೆ?ಕರೆ ಮಾಡಿದ ಆ ಅಪರಿಚಿತ ವ್ಯಕ್ತಿ ಯಾರು?

ನ್ಯೂಸ್‌ ನಾಟೌಟ್‌:ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದೆ.ನಾವು ಎಷ್ಟೇ ಬುದ್ಧಿವಂತರಾಗಿದ್ದರೂ, ಎಚ್ಚರಿಕೆಯಿಂದ ಇದ್ದರೂ ಸಾಕಾಗ್ತಿಲ್ಲ. ಅದರಲ್ಲೂ ಆನ್ ಲೈನ್‌ನಲ್ಲಿ ಕಾಟ ಕೋಡೋರ ಸಂಖ್ಯೆ ಈಗೀಗ ಹೆಚ್ಚಾಗಿದೆ.ಇದೀಗ ಕಳ್ಳತನದಲ್ಲಿ ಮತ್ತೊಂದು ಹೊಸ ಟ್ರೆಂಡ್‌ ಎಂಬಂತೆ ಸಹಾಯವಾಣಿ ಹೆಸರಿನಲ್ಲಿ ಕರೆ ಮಾಡಿ ಮಹಿಳೆಗೆ 2 ಲಕ್ಷ ರೂ.ವಂಚಿಸಿದ ಘಟನೆ ಬಗ್ಗೆ ವರದಿಯಾಗಿದೆ.ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಗೆಲ್ಲಾ ಗೊತ್ತಿರೋ ಹಾಗೆ , ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬ್ಯಾಂಕ್​ಗಳು ಸಹಾಯವಾಣಿಗಳನ್ನು ತೆರೆದಿರುತ್ತವೆ.ಇದೀಗ ಬ್ಯಾಂಕ್‌ಗಳ ಈ ಕ್ರಮವನ್ನೇ ಸೈಬರ್​ ವಂಚಕರು ದುರ್ಬಳಕೆ ಮಾಡಿಕೊಂಡು ಮಹಿಳೆಗೆ ವಂಚಿಸಿದ್ದಾರೆ.ಬೆಂಗಳೂರಿನ 58 ವರ್ಷದ ಮಹಿಳೆಯೊಬ್ಬರಿಗೆ ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ವಂಚಕ ಕರೆ ಮಾಡಿ, ನಿಮ್ಮ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂ. ಹಣ ವರ್ಗಾವಣೆಯಾಗುತ್ತಿದೆ, ಈ ಹಣವನ್ನ ನೀವೇ ವರ್ಗಾಯಿಸಿದ್ದರೆ ಮೂರನ್ನು ಒತ್ತಿ, ಇಲ್ಲವಾಗಿದ್ದಲ್ಲಿ ಒಂದನ್ನು ಒತ್ತಿ” ಎಂದಿದ್ದಾನೆ.

ಇದರಿಂದ ಗಾಬರಿಯಾದ ಮಹಿಳೆ ಒಂದನ್ನು ಒತ್ತಿದ್ದಾರೆ. ಬಳಿಕ, ವಂಚಕ ನಿಮ್ಮ ಬ್ಯಾಂಕ್ ಮ್ಯಾನೇಜರ್​ರನ್ನು ಸಂಪರ್ಕಿಸಿ ಎಂದು ಕರೆ ಕಟ್ ಮಾಡಿದ್ದಾನೆ. ಅನುಮಾನಗೊಂಡ ಮಹಿಳೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಖಾತೆಯಲ್ಲಿದ್ದ 2 ಲಕ್ಷ ರೂ. ಹಣ ಕಳೆದುಕೊಂಡಿದ್ದರು. ತಕ್ಷಣ ಮಹಿಳೆ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ (1930)ಗೆ ಪ್ರಾಥಮಿಕ ದೂರು ನೀಡಿದ್ದಾರೆ.ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸುಳ್ಯ: ಮಡಪ್ಪಾಡಿಯ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು: 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಟೆಕ್ನಿಷಿಯನ್ ಸಾವು!

ಪುತ್ತೂರು: ಬಿಜೆಪಿಯ ಭೀಷ್ಮ ಉರಿಮಜಲು ಕೆ. ರಾಮ ಭಟ್ ಇನ್ನಿಲ್ಲ