ಕ್ರೈಂವೈರಲ್ ನ್ಯೂಸ್

ಮೆಣಸಿನ ಬಜ್ಜಿ ಮಾಡಿ ತಿಂದು ಚಿನ್ನ ಹಣ ಕದ್ದೊಯ್ದ ಕಳ್ಳರು..! ಗ್ಯಾಸ್‌ ಸಿಲಿಂಡರ್ ಗಳೂ ನಾಪತ್ತೆ..!

ನ್ಯೂಸ್ ನಾಟೌಟ್: ಕಳ್ಳತನಕ್ಕೆ ಬಂದ ಮನೆಯಲ್ಲಿ ಖದೀಮರು ಮೆಣಸಿನಕಾಯಿ ಬಜ್ಜಿ ಮಾಡಿ ತಿಂದು ಹಣ, ಚಿನ್ನಾಭರಣದ ಜೊತೆಗೆ ಗ್ಯಾಸ್‌ ಸಿಲಿಂಡರನ್ನೂ ಕದ್ದು ಪರಾರಿಯಾಗಿದ ಘಟನೆ ನಡೆದಿದೆ.

ಸಾಮಾನ್ಯವಾಗಿ ಕಳ್ಳರು ಚಿನ್ನ, ನಗದು ಸೇರಿದಂತೆ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಇಲ್ಲೊಂದು ವಿಚಿತ್ರ ಪ್ರಕರಣ ನಡೆದಿದ್ದು, ಕಳ್ಳತನಕ್ಕೆ ಬಂದವರು ಚಿನ್ನ, ಹಣದ ಜೊತೆಗೆ ಮನೆಯಲ್ಲಿದ್ದ ಮೂರು ಗ್ಯಾಸ್‌ ಸಿಲಿಂಡರ್‌ ಗಳನ್ನು ಕೂಡಾ ಕದ್ದೊಯ್ದಿದ್ದಾರೆ.

ಈ ಘಟನೆ ಆಂಧ್ರ ಪ್ರದೇಶದ ಮಾರುತಿನಗರ ಎಂಬಲ್ಲಿ ನಡೆದಿದ್ದು, ಇಲ್ಲಿನ ಮನೆಯೊಂದಕ್ಕೆ ಕಳ್ಳತನಕ್ಕೆ ಬಂದ ಕಳ್ಳರು ಅಡುಗೆ ಕೋಣೆಯಲ್ಲಿ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ಮಾಡಿ ತಿಂದು, ಚಿನ್ನ, ಹಣದ ಜೊತೆಗೆ ಮನೆಯಲ್ಲಿದ್ದ ಮೂರು ಗ್ಯಾಸ್‌ ಸಿಲಿಂಡರ್‌ ಗಳನ್ನು ಕದ್ದೊಯ್ದಿದ್ದಾರೆ. ಮನೆಯ ಮಾಲೀಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

Related posts

ಕೊಡಗು: ಕರಿಮೆಣಸು ಕೊಯ್ಲಿಗೆ ಬಂದಾಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ! ನಿಗೂಢ ಸಾವಿನ ಹಿಂದಿದೆಯ ಅಳಿಯನ ಕೈವಾಡ!

ಪಾಳು ಮನೆಯೊಂದರಲ್ಲಿ ಅಸ್ಥಿಪಂಜರಗಳು ಪತ್ತೆಯಾದದ್ದೆಲ್ಲಿ..? ಸ್ಥಳೀಯರು ಈ ಬಗ್ಗೆ ಹೇಳಿದ್ದೇನು..? ಏನಿದು ನಿಗೂಢಯ ರಹಸ್ಯ?

ಚಿಕ್ಕಮಗಳೂರು ಪ್ರವಾಸವನ್ನು15 ದಿನ ಮುಂದೂಡುವಂತೆ ಜಿಲ್ಲಾಡಳಿತ ಮನವಿ..! ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮಳೆಯ ಜೊತೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ..!