ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಸರಣಿ ಭೂಕಂಪಕ್ಕೆ ಸಿಲುಕಿ ನಲುಗಿರುವ ಸಂಪಾಜೆಗೆ ಇದೀಗ ಕೇಂದ್ರದಿಂದ ಭೂಕಂಪನ ಪರಿಶೀಲನಾ ತಜ್ಞರ ತಂಡ ಆಗಮಿಸಿದೆ.
ತಂಡದ ನೇತೃತ್ವವನ್ನು ಮುಖ್ಯಸ್ಥರಾದ ಅಝದ್ ಅಹಮ್ಮದ್ ಬಟ್ ಮತ್ತು ಭೂ ಗರ್ಭ ತಜ್ಞರ ತಂಡ ಇದೀಗ ಆಗಮಿಸಿ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೆಂಥಿಲ್ ,ಮಂಗಳೂರು ವಿಭಾಗದ ಭೂ ಗರ್ಭ ಇಲಾಖೆಯ ಮಹದೇವ್, ತಹಸೀಲ್ದಾರ್ ಅನಿತಾಲಕ್ಷ್ಮಿ, ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ. ಎಮ್. ಶಾಹಿದ್ ತೆಕ್ಕಿಲ್, ಪಂಚಾಯತ್ ಸದಸ್ಯ ಎಸ್. ಕೆ. ಹನೀಫ್ ಸಂಪಾಜೆ, ಕಾಂಗ್ರೆಸ್ ನಾಯಕ ರಹೀಮ್ ಬೀಜದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.