ಸ .ಉ. ಹಿ . ಪ್ರಾಥಮಿಕ ಶಾಲೆ ಸಂಪಾಜೆ ಹಾಗೂ ಆರ್ ಎಂಎಸ್ಎ ಪ್ರೌಢಶಾಲೆ ಸಂಪಾಜೆ ಸುಳ್ಯ ಇದರ 2022-23ನೇ ಸಾಲಿನ ಶೈಕ್ಷಣಿಕ ವರ್ಷದ 2ನೇ ಪೋಷಕರ ಸಭೆ ಶನಿವಾರ ನಡೆಯಿತು.
ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದ ಎಸ್ ಡಿ ಎಂ ಸಿ ಯಲ್ಲಿ 2022.23 ನೇ ಶೈಕ್ಷಣಿಕ ವರ್ಷದಲ್ಲಿ ತೆರವುಗೊಂಡ ಸದಸ್ಯರ ಸ್ಥಾನಕ್ಕೆ ಹೊಸ ಸದಸ್ಯರನ್ನು ನಿಯಮದ ಪ್ರಕಾರ ಆಯ್ಕೆ ಮಾಡಲಾಯಿತು. 2022.23. ನೇ ಕಲಿಕಾಚೇತರಿಕೆ ವರ್ಷದ ಅನುಷ್ಠಾನದ ಪ್ರಗತಿಯ ಕುರಿತು ಚರ್ಚಿಸಲಾಯಿತು. ಶಾಲಾ ಆವರಣದ ಸುತ್ತ ಕಂಪೌಂಡ್ ಹಾಗೂ ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆಯ ಕುರಿತು ಚರ್ಚಿಸಿ, ಮನವಿಯನ್ನು ಸಂಬಂಧಪಟ್ಟವರಿಗೆ ನೀಡುವುದೆಂದು ತೀರ್ಮಾನಿಸಲಾಯಿತು. ಹೈಸ್ಕೂಲ್ ಎಸ್ ಡಿಎಂ ಸಿ ಅಧ್ಯಕ್ಷ ಹೊನ್ನಪ್ಪ ಆಚಾರ್ಯ, ಪ್ರಾಥಮಿಕ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂದನ್ , ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.