ನ್ಯೂಸ್ ನಾಟೌಟ್ : ಮಂಗಳೂರಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ದರೋಡೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸುವಂತೆ ಮಾಡಿದ್ದು, ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರ ಸಾಹಸ ಶ್ಲಾಘನಾರ್ಹ. 6 ತಿಂಗಳಿಂದ ದರೋಡೆಕೋರರು ಖತರ್ನಾಕ್ ಪ್ಲಾನ್ ರೂಪಿಸಿ ಸಹಕಾರಿ ಬ್ಯಾಂಕ್ನಿಂದ ಬರೋಬ್ಬರಿ 2,265 ಬಳೆ, ಓಲೆ, ಸರ ಸೇರಿ ಇತರೆ ಚಿನ್ನಾಭರಣಗಳನ್ನು ದೋಚಿದ್ದರು. ಚಿನ್ನದ ರಾಶಿಯನ್ನು ಕಂಡು ಪೊಲೀಸರೇ ಶಾಕ್ ಗೊಳಗಾಗಿದ್ದಾರೆ.
ಸದ್ಯ ದರೋಡೆಕೋರರಿಂದ 4 ಬ್ಯಾಗ್ನಲ್ಲಿ ಬಚ್ಚಿಟ್ಟಿದ್ದ 14 ಕೋಟಿ ಮೌಲ್ಯದ 18.314 ಕೆ.ಜಿಯ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು,ಆ ದೃಶ್ಯ ನೋಡಿದ್ರೆ ದಂಗಾಗಿ ಹೋಗೋದು ಗ್ಯಾರಂಟಿ.ರಾಶಿ ರಾಶಿ ಚಿನ್ನದ ಜತೆಗೆ ಕೃತ್ಯಕ್ಕೆ ಬಳಸಿರುವ ಫಿಯಟ್ ಕಾರು, 2 ಮಚ್ಚುಗಳು, 2 ಪಿಸ್ತೂಲು, 3 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ 3.80 ಲಕ್ಷ ನಗದು ವಶಕ್ಕೆ ತೆಗೆದುಕೊಂಡಿದ್ದಾರೆ.2016ರಲ್ಲಿ ಮಹಾರಾಷ್ಟ್ರ ಜೈಲಿನಲ್ಲಿ ಕಣ್ಣನ್, ಮುರುಗನ್ ಪರಿಚಯವಾಗಿತ್ತು. ಈ ವೇಳೆ ಇಬ್ಬರಿಗೂ ಸ್ಥಳೀಯ ಶಶಿದೇವರ್ ಪರಿಯಚವಾಗಿತ್ತು. ಶಶಿದೇವರ್ನನ್ನು ಭೇಟಿಯಾಗಿ ಕೋಟೆಕಾರು ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ 2024ರ ನ.27ರಂದು ಮುರುಗನ್, ರಾಜೇಂದ್ರನ್ ಜೊತೆ ಮಂಗಳೂರಿಗೆ ಬಂದಿದ್ದ.ಆಗ ಶಶಿದೇವರ್ ಇಲ್ಲಿ ಅವರಿಗೆ ಎಲ್ಲಾ ವಿಚಾರವನ್ನು ತಿಳಿಸಿದ್ದ. ಆಟೋದಲ್ಲಿ ಬ್ಯಾಂಕ್ ಬಳಿ ಕರೆದೊಯ್ದು ಮಾಹಿತಿ ನೀಡಿದ್ದ ಅದರಂತೆ ಬ್ಯಾಂಕ್ ದರೋಡೆಗೆ ಗ್ಯಾಂಗ್ ಸಂಚು ರೂಪಿಸಿತ್ತು. ಶುಕ್ರವಾರ ಮಸೀದಿ ಪ್ರಾರ್ಥನೆ ಹೊತ್ತಲ್ಲೇ ಮುಂಬೈನಿಂದ ಫಿಯೇಟ್ ಕಾರಿನಲ್ಲಿ ಬಂದು ದರೋಡೆಗೆ ಸಂಚು ರೂಪಿಸಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದರು.
ಮಂಗಳೂರಿನ ಉಳ್ಳಾಲ ತಾಲೂಕಿನ ಕೆಸಿ. ರೋಡ್ ಜಂಕ್ಷನ್ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಜ.17ರಂದು ದರೋಡೆ ನಡೆದಿತ್ತು. ಈ ಪ್ರಕರಣ ಸಂಬಂಧ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದಲ್ಲಿ ಮುಂಬೈನ ಚೆಂಬೂರ್ ತಿಲಕ ನಗರದ ಕಣ್ಣನ್ ಮಣಿ (36), ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ (36), ಮುಂಬೈನ ದೊಂಬಿವಲಿ ವೆಸ್ಟ್ನ ಯೊಸುವಾ ರಾಜೇಂದ್ರನ್ (35), ಷಣ್ಣುಗ ಸುಂದರಂ ಎಂಬುವರನ್ನು ಬಂಧಿಸಲಾಗಿದೆ.