ನ್ಯೂಸ್ ನಾಟೌಟ್ : ಮಕ್ಕಳ ವಿಷಯದಲ್ಲಿ ನಾವು ತುಂಬಾ ಕೇರ್ ಫುಲ್ ಆಗಿರಬೇಕಾಗುತ್ತದೆ.ವಾಹನದಲ್ಲಿ ಪ್ರಯಾಣಿಸುವಾಗ ಮಾತ್ರವಲ್ಲದೆ ರಸ್ತೆಬದಿ ನಡೆದುಕೊಂಡು ಹೋಗುವಾಗಲು ಬಹಳ ಜಾಗ್ರತೆಯಿಂದ ನಡೆದುಕೊಂಡು ಹೋಗುವುದು ತುಂಬಾನೇ ಮುಖ್ಯ.ಯಾಕೆಂದರೆ ಈಗಿನ ರಸ್ತೆಗಳೋ..ಅದರಲ್ಲಿ ಇರೋ ಗುಂಡಿಯೋ .. ಪ್ರಾಬ್ಲಂ ಹೇಳಿದ್ರೆ ನೆಪ ಹೇಳಿ ನುಣುಚಿಕೊಳ್ಳುವವರೇ ಹೆಚ್ಚು..ಇನ್ನೂ ಕೆಲವು ಕಡೆ ಅಲ್ಲಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುತ್ತವೆ, ಆಗ ತೆರೆದ ಚರಂಡಿ ಗುಂಡಿಗಳನ್ನು ಹಾಗೆಯೇ ಬಿಟ್ಟು ತೆರಳುವವರು ಇದ್ದಾರೆ.ಆದರೆ ಈ ದಾರಿಯಲ್ಲಿ ನಡೆದು ಕೊಂಡು ಬಂದರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ..
ಹೀಗೆ ಇಲ್ಲೊಬ್ರು ಮಹಿಳೆ ಮಗುವಿನೊಂದಿಗೆ ಫೋನಲ್ಲಿ ಮಾತನಾಡಿಕೊಂಡು ಬರುತ್ತಾರೆ. ಆದರೆ ಮೈಮರೆತು ಸೀದಾ ಹೋಗಿ ಚರಂಡಿ ಗುಂಡಿಗೆ ಬಿದ್ದಿದ್ದಾರೆ. ಹೌದು ಆ ಮಹಿಳೆ ಮಗುವನ್ನು ಕಂಕುಳಲ್ಲಿ ಎತ್ಕೊಂಡು ಫೋನಲ್ಲಿ ಮಾತಾಡ್ತಾ ಬರ್ತಿದ್ದ ವೇಳೆ ಆಯತಪ್ಪಿ ತೆರೆದ ಚರಂಡಿಯೊಳಗೆ ಮಗುವಿನ ಸಮೇತ ಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಘಾತಕಾರಿ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಈ ಘಟನೆ 2021 ರಲ್ಲಿ ಫರಿದಾಬಾದ್ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ರಸ್ತೆ ಬದಿಯಿದ್ದ ತೆರೆದ ಚರಂಡಿ ಗುಂಡಿಯನ್ನು ಗಮನಿಸಿದೆ ಮಹಿಳೆಯೊಬ್ಬರು ಮಗುವಿನ ಸಮೇತ ಆ ಗುಂಡಿಗೆ ಬಿದ್ದಿದ್ದಾರೆ. ಆ ಮಹಿಳೆ ಮಗುವನ್ನು ಕಂಕುಳಲ್ಲಿ ಎತ್ಕೊಂಡು ಫೋನಲ್ಲಿ ಮಾತಾಡ್ತಾ ಬರ್ತಿದ್ದ ವೇಳೆ ಆಯತಪ್ಪಿ ತೆರೆದ ಚರಂಡಿಯೊಳಗೆ ಮಗುವಿನ ಸಮೇತ ಬಿದ್ದಿದ್ದಾರೆ. ಆ ತಕ್ಷಣವೇ ಸ್ಥಳೀಯರು ಮಗು ಮತ್ತು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.