ನ್ಯೂಸ್ ನಾಟೌಟ್ ತೆಲಂಗಾಣದಲ್ಲಿ ಆಯೋಜಿಸಿದ 14 ವರ್ಷದ ಒಳಗಿನ ಬಾಲಕಿಯರ ಶಾಲಾ ಶಿಕ್ಷಣ ಇಲಾಖೆಯ 68ನೇ ರಾಷ್ಟ್ರೀಯ ಮಟ್ಟದ S.G.F.I. ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಿದ್ದ ಸೋನಾ ಅಡ್ಕಾರ್ಗೆ 7ನೇ ಸ್ಥಾನ ಲಭಿಸಿದೆ. ಸ್ಪರ್ಧೆಯಲ್ಲಿ ದೇಶದ ಒಟ್ಟು 32 ರಾಜ್ಯಗಳ 160 ಯೋಗಪಟುಗಳು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಸೋನಾ ಅಡ್ಕಾರ್ 7ನೇ ಸ್ಥಾನ ಪಡೆದು ರಾಜ್ಯ ಮತ್ತು ಈಕೆ ಕಲಿಯುತ್ತಿರುವ ಸುಳ್ಯದ ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ನಗದು ಪುರಸ್ಕಾರ ನೀಡಿ ಗೌರವಿಸಿದೆ. ಸೋನಾ ಅಡ್ಕಾರ್ ಸುಳ್ಯದ ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ. ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಅಡ್ಕಾರ್ ಅವರ ಪುತ್ರಿ.