ನ್ಯೂಸ್ ನಾಟೌಟ್ :ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜ.24 ಶುಕ್ರವಾರದಂದು ಕ್ಷಯ ರೋಗದ ಕುರಿತು ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು.ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿ-ಕ್ಷಯ ಯೋಜನೆಯ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಆಯುಷ್ ಇಲಾಖೆ ದಕ್ಷಿಣ ಕನ್ನಡದ ಮಾರ್ಗಸೂಚಿ ಪ್ರಕಾರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ , ಸ್ವಸ್ಥ ವೃತ್ತ ಮತ್ತು ಕಾಯಚಿಕಿತ್ಸಾ ವಿಭಾಗದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು.
ಕಾರ್ಯಾಗಾರದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ. ದೀಪ ಬೆಳಗಿಸುವುದರೊಂದಿಗೆ ನಡೆಸಿದರು. ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶಬೀನ ಟಿ.ಟಿ. ಹಾಗೂ ಕಾಯ ಚಿಕಿತ್ಸ ವಿಭಾಗದ ಸಹಪ್ರಾಧ್ಯಾಪಕ ಡಾ. ಅವಿನಾಶ್ ಎಸ್. ಕ್ಷಯರೋಗ ಹರಡುವ ವಿಧಾನ, ಇದರ ಲಕ್ಷಣ, ಚಿಕಿತ್ಸೆ ಹಾಗೂ ಇದರ ನಿರ್ಮೂಲನೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ, ಎನ್ ಎಸ್ ಎಸ್ ಯೋಜನಾಧಿಕಾರಿ ಡಾ.ಪ್ರಮೋದ ಪಿ.ಎ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್ಎಸ್ಎಸ್ ವಿದ್ಯಾರ್ಥಿನಿಯಾದ ಸುಜ್ಯಶ್ರೀ ಸಾಹೋ ಕ್ಷಯ ರೋಗ ನಿರ್ಮೂಲನಾ ಪ್ರತಿಜ್ಞಾವಿಧಿಯನ್ನು ಬೋಧಿಸಿ,ವೈಶಾಲಿ ಪಿ ಜೆ, ಪ್ರಸನ್ನ ಬಿ.ಎಸ್, ರಾಹುಲ್ ರಾಜನ್ ಹಾಗು ದೀಪ್ತಿ ಧರ್ಮರಾಜ್ ಪ್ರಾರ್ಥಿಸಿ, ರಕ್ಷಿತಾ ಬಿ ಸ್ವಾಗತಿಸಿ, ರೋಹನ್ ಎಲ್ ಕೆ ವಂದಿಸಿದರು.