ನ್ಯೂಸ್ ನಾಟೌಟ್: ಸತತ ಭೂಕಂಪನದಿಂದ ನಲುಗಿರುವ ಸಂಪಾಜೆ ಈಗ ಪ್ರಕೃತಿಯಲ್ಲಿನ ಚಿತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.
ಬೆಳ್ತಂಗಡಿಯಲ್ಲಿ ರಕ್ತ ಮಳೆಯಾದ ಸುದ್ದಿ ಬಂದ ಬೆನ್ನಲ್ಲೇ ಸಂಪಾಜೆಯ ಕಾಡುಪಂಜದ ಕೆ.ಆರ್.ಕುಶಾಲಪ್ಪ ಅವರ ಮನೆಯಲ್ಲಿ ಆರೆಂಜ್ (ಕಿತ್ತಳೆ) ಬಣ್ಣದ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 8:55 ಕ್ಕೆ ಹಾಗೂ ಬೆಳಗ್ಗೆ 10:40 ಕ್ಕೆ ಮತ್ತೊಂದು ಸಲ ಒಟ್ಟು ಎರಡು ಬಾರಿ ಆರೆಂಜ್ ಮಳೆಯಾಗಿದೆ.
ಆರಂಭದಲ್ಲಿ ಕೆಂಪು ಬಣ್ಣದಂತೆ ಕಂಡರೂ ಒಂದು ಬಕೆಟ್ ನಲ್ಲಿ ಮಳೆ ನೀರನ್ನು ಸಂಗ್ರಹಿಸಿದಾಗ ಅದು ಲೈಟ್ ಆರೆಂಜ್ ಬಣ್ಣದಿಂದ ಕಾಣಿಸಿತು ಎಂದು ಮನೆಯ ಗೃಹಿಣಿ ವನಿತಾ ಕಾಡುಪಂಜ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಇದು ಪ್ರಕೃತಿಯಲ್ಲಿ ಆಗಿರುವ ಬದಲಾವಣೆಯೋ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಆಗಿದೆಯೋ ಅನ್ನುವುದು ತಿಳಿದು ಬರಬೇಕಿದೆ.