ನ್ಯೂಸ್ ನಾಟೌಟ್: ತಮಿಳುನಾಡಿನ ಕಬಡ್ಡಿ ಆಟಗಾರ್ತಿಯರ ಮೇಲೆ ಪಂಜಾಬ್ನಲ್ಲಿ ಹಲ್ಲೆ ನಡೆದಿದೆ. ಪಂಜಾಬಿನ ಭಟಿಂಡಾದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಕಬಡ್ಡಿ ಆಟಗಾರ್ತಿಯರು ಭಾಗವಹಿಸಿದ್ದ ವೇಳೆ ಈ ಘಟನೆ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media)ವಿಡಿಯೋ ವೈರಲ್ ಆಗಿದೆ.ಪಂದ್ಯದ ರೆಫ್ರೆ ನಿರ್ಧಾರದಿಂದ ಈ ಜಗಳ ಆರಭವಾಯಿತು ಎಂದು ವರದಿಯಾಗಿದೆ.ತಮಿಳುನಾಡು ಮತ್ತು ದರ್ಭಾಂಗ ವಿಶ್ವವಿದ್ಯಾಲಯದ ಮಧ್ಯೆ ಕಬಡ್ಡಿ ಪಂದ್ಯ ನಡೆಯುತ್ತಿತ್ತು. ಈ ವೇಳೆ ರೆಫ್ರಿ ತೀರ್ಪು ನೀಡಿದ ತೀರ್ಪನ್ನು ತಮಿಳುನಾಡು ಆಟಗಾರ್ತಿಯರು ಪ್ರಶ್ನಿಸಿದ್ದಾರೆ.ಈ ವೇಳೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ವಿಡಿಯೊದಲ್ಲಿ, ಆಟಗಾರ್ತಿಯರು ಕೆಲವು ಪುರುಷರೊಂದಿಗೆ ಘರ್ಷಣೆ ನಡೆಸುತ್ತಿರುವುದನ್ನು ಕಾಣಬಹುದು.ಎರಡೂ ಕಡೆಯವರು ಪ್ಲಾಸ್ಟಿಕ್ ಚಯರ್ಗಳನ್ನು ಎಸೆಯುವುದನ್ನು ನೋಡಬಹುದು.ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ನಮ್ಮ ರಾಜ್ಯದ ಆಟಗಾರ್ತಿಯರು ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.ಶೀಘ್ರದಲ್ಲೇ ರಾಜ್ಯಕ್ಕೆ ಮರಳಲಿದ್ದಾರೆ ಎಂದಿದ್ದಲ್ಲದೇ ನಮ್ಮ ಆಟಗಾರ್ತಿಯರಿಗೆ ಯಾವುದೇ ದೊಡ್ಡ ಗಾಯಗಳು ಆಗಿಲ್ಲ. ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರು ದೆಹಲಿಗೆ ಹಿಂತಿರುಗಲಿದ್ದು, ಶೀಘ್ರದಲ್ಲೇ ಅವರು ಚೆನ್ನೈಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.