ನ್ಯೂಸ್ ನಾಟೌಟ್: ಸರಣಿ ಭೂ ಕಂಪನದ ಬೆನ್ನಲ್ಲೇ ಪೆರಾಜೆ ಸಮೀಪದ ಕೋಳಿಕಮಲೆ ಬೆಟ್ಟ ಜರಿದಿದೆ ಎನ್ನುವಂತಹ ಗೂಗಲ್ ಫೋಟೋ ಸಹಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂಬುದನ್ನು ಕೊಡಗು ಭೂ ತಜ್ಞ ಅನನ್ಯ ವಾಸುದೇವ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಅನನ್ಯ ವಾಸುದೇವ್, ಗೂಗಲ್ ನಲ್ಲಿ ತುಂಬಾ ಹಳೆಯ ಫೋಟೋಗಳು ಅಪ್ಲೋಡ್ ಆಗಿರುತ್ತದೆ. ಫೋಟೋ ನೋಡಿದರೆ ಜರಿದ ಭಾಗ ತುಂಬಾ ಒಣಗಿದ ರೀತಿಯಲ್ಲಿ ಕಾಣಿಸುತ್ತಿದೆ. ಈ ಮಳೆಗಾಲದಲ್ಲಿ ಸ್ಲೈಡ್ ಆಗಿದ್ದರೆ ಚಿತ್ರ ಹಸಿರಾಗಿ ಒದ್ದೆಯಾಗಿ ಕಾಣಿಸಿಕೊಳ್ಳುತ್ತಿತ್ತು ಎಂದು ತಿಳಿಸಿದ್ದಾರೆ.