ಉಡುಪಿಕರಾವಳಿ

ಕಾರ್ಕಳ:ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬಸ್‌:ವಾಹನ ಜಖಂ, 13 ಮಂದಿಗೆ ಗಾಯ

185

ನ್ಯೂಸ್‌ ನಾಟೌಟ್‌: ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಭೀಕರ ಅಪಘಾತವೊಂದು ಸಮಭವಿಸಿದೆ. ನಿಂತಿದ್ದ ಲಾರಿಗೆ ಸರ್ಕಾರಿ ಬಸ್‌ (Bus) ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.ಅಪಘಾತದಲ್ಲಿ (Accident) ಬಸ್ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗ್ಗೆ ಮಂಜು ಆವರಿಸಿದ ಕಾರಣ ನಿಂತಿದ್ದ ಲಾರಿ ಕಾಣಿಸಲಿಲ್ಲ ಎನ್ನಲಾಗಿದೆ. ಧರ್ಮಸ್ಥಳದ (Dharmasthala) ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಇದಾಗಿದ್ದು ಚಿಕ್ಕೋಡಿ (Chikkodi) ಡಿಪೋಗೆ ಸೇರಿದ್ದು ಎನ್ನಲಾಗಿದೆ. ಈ ವೇಳೆ ಕಾರ್ಕಳ ದಾಟಿ ಸಾಣೂರು ಶ್ರೀರಾಮ ಮಂದಿರದ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸ್ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್‌ ಗುದ್ದಿದ ವೇಗಕ್ಕೆ ಲಾರಿ ಡಿವೈಡರ್‌ ಮೇಲೆ ಹೋಗಿ ನಿಂತಿದೆ.ಸ್ಥಳೀಯರು ಗಾಯಾಳುಗಳನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

See also  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಿಕ್ಷಾ ಡಿಕ್ಕಿ,ನಾಲ್ಕು ತಿಂಗಳ ಗರ್ಭಿಣಿ ಸ್ಥಳದಲ್ಲೇ ಮೃತ್ಯು
  Ad Widget   Ad Widget   Ad Widget   Ad Widget   Ad Widget   Ad Widget