ನ್ಯೂಸ್ ನಾಟೌಟ್: ಕೊಡಗಿನ ಬೆಡಗಿ ಹಾಗೂ ಪ್ಯಾನ್ ಇಂಡಿಯಾ ನಾಯಕಿ ರಶ್ಮಿಕಾ ಮಂದಣ್ಣ ವ್ಹೀಲ್ ಚೇರ್ ನಲ್ಲಿ ಕಾಣಿಸಿಕೊಂಡ ದೃಶ್ಯವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಬುಧವಾರ (ಜನವರಿ 22) ಶಂಶಾಬಾದ್ ವಿಮಾನ ನಿಲ್ದಾಣವನ್ನು ತಲುಪಿದಾಗ ಈ ವಿಚಾರ ಬಯಲಿಗೆ ಬಂದಿದ್ದು, ಕಾರಿನಿಂದ ಇಳಿಯುವಾಗಲೂ ಕಷ್ಟಪಟ್ಟು ಒಂದೇ ಕಾಲಿನಲ್ಲಿ ನಡೆಯುತ್ತಿದ್ದರು.
ಹಾಗಾದರೆ ರಶ್ಮಿಕಾ ಅವರಿಗೆ ಏನಾಗಿದೆ. ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಅವರು ನಡೆದು ಕೊಂಡು ಬಂದ ಸ್ಥಿತಿ ನೋಡಿದರೆ ಗಾಯ ದೊಡ್ಡದಾಗಿದೆ ಮತ್ತು ಗಂಭೀರವಾಗಿದೆ ಎಂದೇ ಗೊತ್ತಾಗುತ್ತಿದೆ. ಹೌದು, ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಕಾಲು ಉಳುಕಿತ್ತು. ಆದರೆ ಇದು ಈಗ ಅವರನ್ನು ಆಗಾಗ ಕಾಡುತ್ತಿದೆ.
ಸದ್ಯ ಬಾಲಿವುಡ್ ಸ್ಟಾರ್ ಹೀರೋ ವಿಕ್ಕಿ ಕೌಶಲ್ ಅಭಿನಯದ ಚಾವಾ ಐತಿಹಾಸಿಕ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಪತ್ನಿ ಮಹಾರಾಣಿ ಯಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ರಶ್ಮಿಕಾ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ.