ನ್ಯೂಸ್ ನಾಟೌಟ್: ಕಳೆದ ಕೆಲವು ತಿಂಗಳಿನಿಂದ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಬಡ್ಡಡ್ಕ ಭಾಗದ ಜನರನ್ನು ನಿದ್ದೆಯನ್ನು ಚಿರತೆ ಕಸಿದುಕೊಂಡಿದೆ.
ರಾತ್ರಿ ಆದರೆ ಸಾಕು ಪ್ರತಿ ನಿತ್ಯವೂ ನಾಯಿ, ಕೋಳಿಗಳು ಚಿರತೆ ಬಾಯಿಗೆ ಆಹಾರವಾಗುತ್ತಿದೆ. ಕಳೆದೊಂದು ವಾರದಲ್ಲಿ ಚಿರತೆಯ ಅಟ್ಟಹಾಸ ಮಿತಿಮೀರಿದೆ ಎಂದು ಊರಿನವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ನಿತ್ಯ ಕಿರುಕುಳ ನೀಡುತ್ತಿರುವ ಚಿರತೆಯಿಂದಾಗಿ ಆ ಭಾಗದ ಜನರು ಜೀವ ಭಯದಿಂದ ಬದುಕುವಂತಾಗಿದೆ.
ಬಡ್ಡಡ್ಕ, ಅಜ್ಜಾವರ, ನರಂದಗೋಳಿ, ಪಡ್ಡಂಬೈಲು ಭಾಗದಲ್ಲಿ ಹಲವಾರು ಮನೆಯ ಕೋಳಿ, ನಾಯಿಗಳೆಲ್ಲ ಈಗಾಗಲೇ ಚಿರತೆ ಬಾಯಿಗೆ ಬಿದ್ದಾಗಿದೆಯಂತೆ. ಸದಾ ಆನೆಗಳ ಕಾಟದಿಂದ ನೊಂದು ಬೆಂದಿರುವ ಈ ಭಾಗದ ಜನರಿಗೆ ಈಗ ಚಿರತೆ ಹಾವಳಿಯೂ ದೊಡ್ಡ ತಲೆ ನೋವಾಗಿದೆ.