ನ್ಯೂಸ್ ನಾಟೌಟ್: ಡಾ. ರಾಜ್ಕುಮಾರ್ ಗಂಧದ ಗುಡಿ ಚಿತ್ರದ “ನಾವಾಡುವ ನುಡಿಯೇ ಕನ್ನಡ ನುಡಿ.. ಚಿನ್ನದ ನುಡಿ.. ಸಿರಿಗನ್ನಡ ನುಡಿ.. ನಾವಿರುವ ತಾಣವೇ ಗಂಧದ ಗುಡಿ..” ಹಾಡು ಇದೀಗ ದೂರದ ಚೀನಾದಲ್ಲಿ ಮೊಳಗಿದೆ. ಅಲ್ಲಿನ ಸೂಪರ್ ಮಾರ್ಕೆಟ್ವೊಂದರಲ್ಲಿ ಈ ಹಾಡು ಕೇಳಿದ್ದೇ ತಡ, ಅಲ್ಲಿನ ಕನ್ನಡಿಗರು ಸೂಪರ್ ಮಾರ್ಕೆಟ್ ನ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷಪಟ್ಟಿದ್ದಾರೆ.
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರಿಂದ ಮಾತ್ರವಲ್ಲದೆ, ಪರಭಾಷಿಕರೂ ಭಾರತೀಯ ಭಾಷೆಯ ಹಾಡು ಚೀನಾದಲ್ಲಿ ಮೊಳಗಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ. ಪ್ರವೀಣ್ ಆರ್ ಎಂಬುವವರು ತಮ್ಮ ಟ್ವಿಟ್ಟರ್ ನಲ್ಲಿ ಹಾಡಿನ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. “ಅಣ್ಣಾವ್ರು.. ಕನ್ನಡ ನಾಡಿನ ದೊರೆ.. ಚೀನಾದಲ್ಲಿ ಕನ್ನಡ ಹಾಡು” ಎಂದು ಕ್ಯಾಪ್ಷನ್ ನೀಡಿದ್ದಾರೆ.
Click