ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಪ್ರಕರಣದ ಆರೋಪಿ, ನಟ ದರ್ಶನ್ ಬಂದೂಕು ಪರವಾನಗಿಯನ್ನು ಪೊಲೀಸ್ ಇಲಾಖೆ ರದ್ದು ಮಾಡಿದೆ. ಸೆಲೆಬ್ರಿಟಿ ಆಗಿದ್ದ ದರ್ಶನ್, ತಮ್ಮ ರಕ್ಷಣೆಗಾಗಿ ಪರವಾನಗಿ ಹೊಂದಿದ್ದ ಬಂದೂಕನ್ನು ಪೊಲೀಸರಿಂದ ಈ ಹಿಂದೆ ಪಡೆದುಕೊಂಡಿದ್ದರು. ಆದರೆ ಇತ್ತೀಚೆಗಷ್ಟೆ ಪೊಲೀಸರು, ರೇಣುಕಾಸ್ವಾಮಿ ಪ್ರಕರಣದ ಉದಾಹರಣೆ ನೀಡಿ ದರ್ಶನ್ ರ ಬಂದೂಕು ಪರವಾನಗಿಯನ್ನು ರದ್ದು ಮಾಡುವುದಾಗಿ ಹೇಳಿದ್ದರು.
ಪೊಲೀಸರಿಗೆ ಪತ್ರ ಬರೆದಿದ್ದ ದರ್ಶನ್, ತಮ್ಮ ಬಂದೂಕು ಲೈಸೆನ್ಸ್ ಅನ್ನು ರದ್ದು ಮಾಡದಂತೆ ಮನವಿ ಮಾಡಿದ್ದರು. ತಮಗೆ ಭದ್ರತೆಯ ಅವಶ್ಯಕತೆ ಇದ್ದು, ಆ ಕಾರಣಕ್ಕೆ ತಮಗೆ ಬಂದೂಕಿನ ಅಗತ್ಯತೆ ಇದೆಯೆಂದು ಹೇಳಿದ್ದರು. ಆದರೆ ದರ್ಶನ್ ಮನವಿಯನ್ನು ತಿರಸ್ಕರಿಸಿರುವ ಪೊಲೀಸ್ ಇಲಾಖೆ, ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಬಂದೂಕನ್ನು ಇರಿಸಿಕೊಳ್ಳುವಂತಿಲ್ಲ ಎಂದು ಹೇಳಿ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ. ಲೈಸೆನ್ಸ್ ರದ್ದಾಗಿರುವ ಕಾರಣ, ದರ್ಶನ್ ಈ ಕೂಡಲೇ ತಮ್ಮ ಬಂದೂಕನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸರೆಂಡರ್ ಮಾಡಬೇಕಿದೆ ಎನ್ನಲಾಗಿದೆ.
ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಗೆ ಹೈಕೋರ್ಟ್ ನಿಯಮಿತ ಜಾಮೀನು ನೀಡಿದೆ. ದರ್ಶನ್ ಮಾತ್ರವಲ್ಲದೆ ಪ್ರಕರಣದ ಎಲ್ಲ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಮಾಡಲಾಗಿದೆ. ಆದರೆ ಪೊಲೀಸರು, ದರ್ಶನ್ ಗೆ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಇನ್ನು ನಟ ದರ್ಶನ್, ರೇಣುಕಾಸ್ವಾಮಿ ಪ್ರಕರಣದ ತನಿಖೆ ವೇಳೆ ತಮ್ಮಿಂದ ಪೊಲೀಸರು ವಶಪಡಿಸಿಕೊಂಡಿರುವ 37 ಲಕ್ಷ ರೂಪಾಯಿ ಹಣವನ್ನು ಮರಳಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು.
Click