ನ್ಯೂಸ್ ನಾಟೌಟ್ : ರೈಲಿನೊಳಗೆ ಬೆಡ್ ಶೀಟ್ ಗಳನ್ನು ಕದ್ದು ಯುವತಿಯೊಬ್ಬಳು ರೈಲ್ವೆ ಸಿಬ್ಬಂದಿ ಬಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ.
ರೈಲ್ವೆ ಸಿಬ್ಬಂದಿ ಪ್ಲಾಟ್ ಫಾರ್ಮ್ನಲ್ಲಿ ಪ್ರಯಾಣಿಕರ ಲಗೇಜ್ಗಳನ್ನು ಪರಿಶೀಲಿಸುತ್ತಿದ್ದ ವೇಳೆ ರೈಲ್ವೆ ಬೋಗಿಗಳಲ್ಲಿರಿಸಿದ್ದ ಟವೆಲ್ಗಳು ಹಾಗೂ ಬೆಡ್ಶೀಟ್ಗಳನ್ನು ಕದ್ದಿರುವುದು ದೃಢಪಟ್ಟಿದೆ. 2018 ರಲ್ಲಿ 2 ಲಕ್ಷಕ್ಕೂ ಹೆಚ್ಚು ಟಾವೆಲ್ ಗಳು ಮತ್ತು 7 ಸಾವಿರಕ್ಕೂ ಬೆಡ್ ಶೀಟ್ ಗಳು ಕಳ್ಳತನವಾಗಿದ್ದದ್ದು ಬೆಳಕಿಗೆ ಬಂದಿತ್ತು. ತನಿಖೆಯ ಬಳಿಕ ಅಂತಹ ಪ್ರಕರಣಗಳು ಕಡಿಮೆಯಾಗಿತ್ತು. ಈಗ ಮತ್ತೆ ಪ್ರಯಾಗ್ ರಾಜ್ ನಲ್ಲಿ ಕಳ್ಳತನ ಮರುಕಳಿಸಿದೆ.
ಪ್ರಯಾಣಿಕರ ಕಂಬಳಿಗಳು ಮತ್ತು ದಿಂಬುಗಳಂತಹ ರೈಲ್ವೆ ಆಸ್ತಿಯನ್ನು ಕದಿಯುವ ಪ್ರಕರಣಗಳು ದಿನದಿಂದ ಹೆಚ್ಚುತ್ತಿವೆ ಎನ್ನಲಾಗಿದ್ದು, ಆಕೆಗೆ ಕಠಿಣ ದಂಡ ವಿಧಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
Click