ನ್ಯೂಸ್ ನಾಟೌಟ್: ಸಾವಿನ ಅಂಚಿನಲ್ಲಿ ಇದ್ದ ತನ್ನ ಮರಿಯನ್ನು ತಾಯಿ ಶ್ವಾನವೊಂದು ಟರ್ಕಿಯ ಪಶುವೈದ್ಯರ ಕ್ಲಿನಿಕ್ ಗೆ ಕಚ್ಚಿ ಕೊಂಡು ಬಂದು ಚಿಕಿತ್ಸೆ ಕೊಡಿಸಿದ ವಿಶೇಷ ಘಟನೆ ನಡೆದಿದೆ.
ಭಾರೀ ಮಳೆ ನಡುವೆಯೇ ಶ್ವಾನ ಮರಿಯನ್ನು ಕಚ್ಚಿಕೊಂಡು ಕ್ಲಿನಿಕ್ ನತ್ತ ಬಂದಿತ್ತು. ಕೂಡಲೇ ವೈದ್ಯರು ಮರಿಯನ್ನು ಪರಿಶೀಲಿಸಿದಾಗ ಅದರ ಹೃದಯ ಬಡಿತ ಕಡಿಮೆಯಾಗಿತ್ತು. ಕೂಡಲೇ ಚಿಕಿತ್ಸೆ ನೀಡಿ ಅದನ್ನು ಬದುಕಿಸಿದ್ದಾರೆ. ಚಿಕಿತ್ಸೆ ನೀಡುವ ವೇಳೆ ಹೆಣ್ಣು ಶ್ವಾನ ವೈದ್ಯರ ಬಳಿಯೇ ಇತ್ತು ಎನ್ನಲಾಗಿದೆ. ಆ ಶ್ವಾನದ ಸ್ಪಂದನೆ ಮತ್ತು ಅದರ ಬುದ್ಧಿವಂತಿಕೆ ಕಂಡು ವೈದ್ಯರು ಭಾವುಕರಾಗಿದ್ದರು.