ನೆಲ್ಯಾಡಿ

ಸುಬ್ರಹ್ಮಣ್ಯ:ಶಾಲೆಗೆ ಹೋಗುತ್ತಿದ್ದಾಗ ಬೈಕ್‌ ಅಪಘಾತ:ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ

ನ್ಯೂಸ್‌ ನಾಟೌಟ್‌:ಬೆಳಗ್ಗೆ ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಧರ್ಮಸ್ಥಳ – ಮರ್ಧಾಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪೇರಡ್ಕ ಸಮೀಪದ ಗರ್ಗಾಸ್‌ಪಾಲ್‌ನಲ್ಲಿ ಈ ದುರ್ಘಟನೆ ನಡೆದಿದೆ.ವಿದ್ಯಾರ್ಥಿ ಶಾಲೆಗೆ ಬೈಕ್‌ನಲ್ಲಿ ತೆರಳುತ್ತಿದ್ದು, ಬೈಕ್‌ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಪರಿಣಾಮ ಈ ದುರಂತ ನಡೆದಿದೆ.

ಈತ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು,ಪೇರಡ್ಕದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಓದುತ್ತಿದ್ದ.ಬೆಳಗ್ಗೆ ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ಶ್ರೀಧರ ಅವರು ತತ್‌ಕ್ಷಣ ಆತನನ್ನು ಮೇಲಕ್ಕೆತ್ತಿ ವಾಹನವೊಂದರಲ್ಲಿ ಕಡಬದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಫ‌ಲಕಾರಿಯಾಗಿಲ್ಲ.ಮೃತರು ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್‌ ಅವರ ಪುತ್ರ ಎಂದು ಹೇಳಲಾಗಿದೆ.ಅವರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಅವೈಜ್ಞಾನಿಕ ಕಾಮಗಾರಿಯೇ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

Related posts

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆ, ಕಾಲೇಜಿಗೆ ನಾಳೆ(ಜು.18) ರಜೆ, ಎಲ್ಲೆಲ್ಲಿ ರಜೆ..? ಇಲ್ಲಿದೆ ಡಿಟೇಲ್ಸ್

ನೆಲ್ಯಾಡಿ: ಕೈ ಟಚ್ ಆಗಿದ್ದಕ್ಕೆ 61 ವರ್ಷದ ಅಜ್ಜನ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ, ಬಾರ್ ಎದುರಲ್ಲೇ ವೃದ್ದನ ಕಿರುಚಾಟ, ನರಳಾಟ..!

ಕಡಬ: ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ್ದ ಮನೆಯನ್ನು ಬುಲ್ಡೋಜರ್ ಹತ್ತಿಸಿ ಪುಡಿಗೈದ ಅಧಿಕಾರಿಗಳು, ತಹಶೀಲ್ದಾರ್-ಪೊಲೀಸರ ನೇತೃತ್ವದಲ್ಲಿ ತೆರವು