ನ್ಯೂಸ್ ನಾಟೌಟ್: ಪ್ರಸಿದ್ಧ ವೀರ್ಯ ದಾನಿ ಎಂದು ಖ್ಯಾತಿ ಪಡೆದಿರುವ ಅಮೆರಿಕದ ಕೈಲ್ ಗೋರ್ಡಿ ಇದೀಗ 100 ಮಕ್ಕಳ ತಂದೆಯಾಗುವ ಸನಿಹದಲ್ಲಿದ್ದಾರೆ ಎನ್ನಲಾಗಿದೆ.
ಕಳೆದ ಕೆಲ ವರ್ಷಗಳಿಂದ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಗರ್ಭಧಾರಣೆಗಾಗಿ ಹೋರಾಡುತ್ತಿದ್ದ ಮಹಿಳೆಯರಿಗೆ ಉಚಿತ ವೀರ್ಯಧಾನ ಮಾಡುತ್ತಿದ್ದ ಗೋರ್ಡಿ ಈವರೆಗೆ 87 ಮಕ್ಕಳ ತಂದೆಯಾಗಿದ್ದಾರೆ. ʻಬಿ ಪ್ರೆಗ್ನೆಂಟ್ ನೌʼ ವೆಬ್ ಸೈಟ್ ಆರಂಭಿಸಿ ಮಹಿಳೆಯರಿಗೆ ವೀರ್ಯದಾನ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಅವರು ನೂರು ಮಕ್ಕಳಿಗೆ ತಂದೆಯಾಗುವ ಸನಿಹದಲ್ಲಿದ್ದಾರೆ ಎಂದು ನ್ಯೂಯಾರ್ಕ್ಪೋಸ್ಟ್ ವರದಿ ಮಾಡಿದೆ.
ನೂರು ಮಕ್ಕಳ ಗುರಿ ಪೂರೈಸಲು ಸ್ವೀಡನ್, ನಾರ್ವೆ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ನ 13 ಮಹಿಳೆಯರಿಗೆ ವೀರ್ಯದಾನ ಮಾಡಲು ಮುಂದಾಗಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಜಾಗತೀಕ ಪ್ರವಾಸ ಹಮ್ಮಿಕೊಂಡಿದ್ದೇನೆ. ಜಪಾನ್, ಐರ್ಲೆಂಡ್ ಮತ್ತು ಕೊರಿಯಾ ಸೇರಿದಂತೆ ಹಲವು ಹೊಸ ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದೇನೆ. ಅಲ್ಲಿ ನಿರ್ದಿಷ್ಟ ಸಂಸ್ಥೆಗಳನ್ನು ಸಂಪರ್ಕಿಸಿ, ಗರ್ಭಧರಿಸಲು ಹಂಬಲಿಸುತ್ತಿರುವ ಮಹಿಳೆಯರಿಗೆ ವೀರ್ಯದಾನ ಮಾಡುತ್ತೇನೆ. ಈ ಮೂಲಕ 2026ರ ವೇಳೆಗೆ ವಿಶ್ವದ ಪ್ರತಿಯೊಂದು ದೇಶದಲ್ಲೂ ಒಂದೊಂದು ಮಗುವನ್ನು ಹೊಂದುವ ಯೋಜನೆ ಹಾಕಿಕೊಂಡಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ.
Click