ನ್ಯೂಸ್ ನಾಟೌಟ್ : ಸಂಪಾಜೆ ಸುತ್ತಮುತ್ತಲು ಹಾಗೂ ಕೊಡಗು ಭಾಗದ ಚೆಂಬು ಗ್ರಾಮದಲ್ಲಿ ಮಂಗಳವಾರ ಸಂಜೆ 4.32 ಕ್ಕೆ ಸಂಭವಿಸಿದ ದಿನದ ಎರಡನೇ ಭೂಕಂಪದ ತೀವ್ರತೆಯು 1.8 ರಷ್ಟು ದಾಖಲಾಗಿತ್ತು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ. ಇಂದು ಬೆಳಗ್ಗೆ ಚೆಂಬುವಿನಲ್ಲಿ ಕೇಂದ್ರವಾಗಿ ಸಂಭವಿಸಿದ ಭೂಕಂಪದ ತೀವ್ರತೆಯೂ 3.0 ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಈ ಕಂಪನಕ್ಕೆ ಹೋಲಿಸಿದರೆ ಇದು ಸಣ್ಣ ಮಟ್ಟಿನ ಕಂಪನವಾಗಿದೆ ಎಂದು ಹೇಳಲಾಗಿದೆ. ವಿಶೇಷವೆಂದರೆ ಈ ಬೆಳಗ್ಗಿನಂತೆ ಸಂಜೆಯೂ ಕೂಡ ಚೆಂಬು ಗ್ರಾಮವೇ ಭೂಕಂಪದ ಕೇಂದ್ರ ಬಿಂದುವಾಗಿದೆ. ಭೂಮಿಯ ಐದು ಕಿಲೋ ಮೀಟರ್ ಆಳದಲ್ಲಿ ಕಂಪನ ಉಂಟಾಗಿದೆ. ಇದರ ತೀವ್ರತೆಯಿಂದಾಗಿ ಕರಿಕೆ, ಮಡಿಕೇರಿ, ಸುಳ್ಯ ತಾಲೂಕಿನಲ್ಲಿ ಕಂಪನವಾಗಿದೆ ಎಂದು ಕೆಎಸ್ ಎನ್ ಡಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.
- +91 73497 60202
- [email protected]
- November 23, 2024 5:04 AM