ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ಪೆರಾಜೆಯಲ್ಲಿ ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿದ್ದ ವಿದ್ಯುತ್ ವೈರ್ ನಿಂದಾಗಿ ಘನ ವಾಹನ ಸವಾರರು ಕೆಲ ಕಾಲ ಸಂಚಾರ ನಡೆಸಲು ಸಾಧ್ಯವಾಗದೆ ಪರದಾಟ ನಡೆಸಿದ ಘಟನೆ ಭಾನುವಾರ ಬೆಳಗ್ಗೆ (೨೭) ನಡೆದಿದೆ.
ಗಾಳಿ ಮಳೆ ಪರಿಣಾಮವಾಗಿ ವೈರ್ ರಸ್ತೆಯ ಮಧ್ಯೆ ಜೋತು ಬಿದ್ದಿತ್ತು. ಲಘು ವಾಹನಗಳು ಎಚ್ಚರಿಕೆಯಿಂದ ಸಂಚಾರ ನಡೆಸಿದವಾದರೂ ಬಸ್ ಸೇರಿದಂತೆ ಘನ ವಾಹನಗಳಿಗೆ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಬಸ್ ನಿಂದ ಕೆಳಕ್ಕೆ ಇಳಿದು ಬಂದ ಚಾಲಕ ಹಾಗೂ ಕಂಡಕ್ಟರ್ ಕೆಲವು ಹೊತ್ತು ಮಾತುಕತೆ ನಡೆಸಿ ಪ್ರಯಾಣಿಕರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಬಸ್ ಅನ್ನು ವಿದ್ಯುತ್ ವೈರ್ ನಿಂದ ಕೆಳಕ್ಕೆ ಪಾಸ್ ಮಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.