ನ್ಯೂಸ್ ನಾಟೌಟ್: ಪಿಲಿಕುಳ ನಿಸರ್ಗಧಾಮದ ಪ್ರಾಣಿ, ಪಕ್ಷಿಗಳನ್ನು ತೋರಿಸಿ ಪತ್ನಿಗೆ ಖುಷಿಕೊಡಬೇಕೆಂದು ಕರೆದುಕೊಂಡು ಹೋಗಿದ್ದ ಪತಿರಾಯನಿಗೆ ಪತ್ನಿ ನೀರು ಕುಡಿಸಿ ಪತ್ನಿ ಬಸ್ ಹತ್ತಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಶಿಲ್ಪಾ (30 ) ಪರಾರಿಯಾದ ಮಹಿಳೆ. ಈಕೆ ತನ್ನ ಗಂಡನೊಂದಿಗೆ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದಿಂದ ಮಂಗಳೂರಿನ ಸರ್ವೀಸ್ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿ ಪಿಲಿಕುಳದ ಬಸ್ ಹತ್ತುವ ಮೊದಲು ಶೌಚಾಲಯಕ್ಕೆ ತೆರಳಿದ ಶಿಲ್ಪಾ ಗಂಡನ ಕಣ್ತಪ್ಪಿಸಿ ಹೋದವರು ಅಲ್ಲಿಂದ ಉಡುಪಿ ಬಸ್ ಹತ್ತಿದ್ದಾರೆ, ಇತ್ತ ಪತ್ನಿಯನ್ನು ಕಾದು ಸುಸ್ತಾದ ಪತಿರಾಯರು ಶಿಲ್ಪಾ ಮೊಬೈಲ್ ಗೆ ಹಲವು ಸಲ ಕರೆ ಮಾಡಿದರೂ ಸ್ವೀಕರಿಸಲಿಲ್ಲ, ಅನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸದ್ಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.