ನ್ಯೂಸ್ ನಾಟೌಟ್: ಮದರಸದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾಗಲೇ ಸುಳ್ಯ ತಾಲೂಕಿನ ಬೆಳ್ಳಾರೆಯ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ.
ಬೆಳ್ಳಾರೆ ತಂಬಿನಮಕ್ಕಿ ನಿವಾಸಿ ರಶೀದ್ ಮುಸ್ಲಿಯಾರ್ ( 51 ) ಮೃತಪಟ್ಟವರಾಗಿದ್ದಾರೆ. ಮುಂಜಾನೆ ತಂಬಿನಮಕ್ಕಿ ಮನೆಯಿಂದ ಕಳಂಜ ಮಸೀದಿಗೆ ತೆರಳಿದ್ದರು. ಬೆಳಗ್ಗೆ 7.30 ಕ್ಕೆ ಮದರಸ ತರಗತಿ ನಡೆಸುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದರು . ಕೂಡಲೇ ಅವರನ್ನು ಪುತ್ತೂರು ಅಸ್ಪತ್ರೆ ಕೊಂಡೊಯ್ದರು ಮಾಡಾವು ತಲುಪಷ್ಟರಲ್ಲಿ ಅವರು ಮೃತಪಟ್ಟರೆನ್ನಲಾಗಿದೆ. ಕಳಂಜ ಬುಖ್ಯಾರಿಯ ಮದರಸ ಖತೀಬರು ಅಸೌಖ್ಯದಿಂದ ರಜೆಯಲ್ಲಿದ್ದ ಸಂದರ್ಭದಲ್ಲಿ ಮಸೀದಿ ಖತೀಬರಾಗಿ ಬದಲಿ ಸೇವೆಯನ್ನು ಮಾಡುತ್ತಿದ್ದರು. ಇವರು ಹಲವಾರು ವರ್ಷಗಳಿಂದ ಬೆಳ್ಳಾರೆಯಲ್ಲಿ ಬುಕ್ ಸ್ಟಾಲ್ ಮತ್ತು ಸುಗಂಧ ದ್ರವ್ಯ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ.