ದೇಶ-ವಿದೇಶವೈರಲ್ ನ್ಯೂಸ್

ತನ್ನ ಯುಟ್ಯೂಬ್ ವಾಹಿನಿಗೆ ಸಂದರ್ಶನ ನೀಡುವಂತೆ ಪೊಲೀಸ್ ಅಧಿಕಾರಿಗೆ ಯೂಟ್ಯೂಬರ್ ನಿಂದ ಬೆದರಿಕೆ..! ಆರೋಪಿ ಅರೆಸ್ಟ್..!

ನ್ಯೂಸ್ ನಾಟೌಟ್ : ತನ್ನ ಯೂಟ್ಯೂಬ್ ವಾಹಿನಿಗೆ ಸಂದರ್ಶನ ನೀಡಲು ನಿರಾಕರಿಸಿದ ಪೊಲೀಸ್ ಅಧಿಕಾರಿಗೆ ಯೂಟ್ಯೂಬರ್ ಒಬ್ಬ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ಬೆದರಿಕೆ ಹಾಕಿರುವ ಮಶಕೂರ್ ರಾಜಾ ದಾದಾ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ನವೆಂಬರ್ 24 ರಂದು ಉತ್ತರ ಪ್ರದೇಶದ ಸಂಭಾಲ್‌ ನಲ್ಲಿ ನಡೆದಿದ್ದ ಕೋಮು ಗಲಭೆಯ ಬಗ್ಗೆ ಸಂಭಲ್ನ ಚಂದೌಸಿ ಸರ್ಕಲ್ ಪೊಲೀಸ್ ಇನ್ಸ್‌ ಪೆಕ್ಟರ್ ಸಂಜು ಕುಮಾರ್ ಚೌಧರಿಗೆ ಸಂದರ್ಶನ ನೀಡಲು ಆರೋಪಿ ಒತ್ತಾಯಿಸುತ್ತಿದ್ದ.

ಪೊಲೀಸ್ ಅಧಿಕಾರಿಯು ಸಂದರ್ಶನ ನೀಡಲು ಒಪ್ಪದಿದ್ದಾಗ ಆರೋಪಿ, ‘ನಾನು ಹೇಳಿದರೆ ಡಿಜಿಪಿ, ಸಿಎಂ ಬಂದು ಸಂದರ್ಶನ ಕೊಡುತ್ತಾರೆ. ಒಲ್ಲೆ ಎನ್ನಲು ನೀನಾರು, ನೋಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡಿರುವ ಯೂಟ್ಯೂಬರ್, ಪೊಲೀಸ್ ಅಧಿಕಾರಿಯ ಸಂದರ್ಶನ ಮಾಡಿ ದೇಶದಾದ್ಯಂತ ಪ್ರಚಾರ ಪಡೆಯುತ್ತೇನೆ ಎಂದು ಹೇಳಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಈಗ ಹಲವು ದಿನಗಳ ಬಳಿಕ ಈತನನ್ನು ಬಂಧಿಸಲಾಗಿದೆ.

ಸಂಭಲ್‌ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿಯಲ್ಲಿ ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ನವೆಂಬರ್‌ 24ರಂದು ಸಮೀಕ್ಷೆ ನಡೆಸಲು ಮುಂದಾದಾಗ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

Click

https://newsnotout.com/2024/12/700-bore-well-kannada-news-19-hours-issue-kannada-news-d/
https://newsnotout.com/2024/12/mother-got-currect-shock-and-injured-infront-of-baby-kad/
https://newsnotout.com/2024/12/8-month-ago-shop-opened-by-friends-kannada-news-case/
https://newsnotout.com/2024/12/air-bag-blast-kannada-news-viral-news-d/
https://newsnotout.com/2024/12/udupi-man-fall-into-well-kananda-news-fire-force-helps/
https://newsnotout.com/2024/12/hotel-love-marriage-life-kannada-news-girlfriend-s/

Related posts

4 ತಿಂಗಳ ಗರ್ಭಿಣಿ ಪತ್ನಿಯನ್ನು ಹತ್ಯೆಗೈದ ಪತಿ..! ಗಂಡನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲು..!

ಬಸ್ಸಿಗಾಗಿ ಕಾಯುತ್ತಿದ್ದ ಶಾಲಾ ಮಕ್ಕಳಿಗೆ ‘ಯಮ’ನಾದ ಖಾಸಗಿ ಬಸ್! 15ರ ವಿದ್ಯಾರ್ಥಿನಿಯ ದುರಂತ ಅಂತ್ಯ..!

ಮಡಿಕೇರಿ: ಕುಸಿಯುವ ಭೀತಿಯಲ್ಲಿ ಗ್ಲಾಸ್ ಬ್ರಿಡ್ಜ್ ..!, ವಿರೋಧಿಗಳ ಕುತಂತ್ರವೇ..? ಹೊಸ ಗ್ಲಾಸ್ ಬ್ರಿಡ್ಜ್ ಗೆ ಏನಿದು ಕಂಟಕ..? ಇಲ್ಲಿದೆ ಡಿಟೇಲ್ಸ್