ನ್ಯೂಸ್ ನಾಟೌಟ್ : ಉದ್ಯಮಿಗಳಾದ ವಿಜಯ್ ಮಲ್ಯ ಮತ್ತು ನೀರವ್ ಮೋದಿಯ 15,000 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದು ಬ್ಯಾಂಕ್ ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪರಾರಿಯಾಗಿರುವ ಉದ್ಯಮಿಯ ಸಾಲದ ಒಂದು ಭಾಗವನ್ನು ಪಾವತಿಸಲು 14,131 ಕೋಟಿ ಮೌಲ್ಯದ ಆಸ್ತಿ (ವಿಜಯ್ ಮಲ್ಯಗೆ ಸೇರಿದ ಆಸ್ತಿ) ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಮೊದಲಾದ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಜಾರಿ ನಿರ್ದೇಶನಾಲಯವು ಒಟ್ಟು 22,280 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ.
ವಶಕ್ಕೆ ಪಡೆದ ಒಟ್ಟು ಮೊತ್ತದಲ್ಲಿ ನೀರವ್ ಮೋದಿಗೆ ಸೇರಿದ 1,052 ಕೋಟಿ ಮತ್ತು ಚೋಕ್ಸಿ ಅವರ 2,565 ಕೋಟಿ ಹಣ ಒಳಗೊಂಡಿದೆ. ನ್ಯಾಷನಲ್ ಸ್ಪಾಟ್ ಎಕ್ಸ್ ಚೇಂಜ್ ಲಿಮಿಟೆಡ್ ಅಥವಾ ಎನ್ ಎಸ್ ಇ ಎಲ್ ನಲ್ಲಿನ 17.5 ಕೋಟಿ ಮೊತ್ತವನ್ನು ಸೀಜ್ ಮಾಡಿದೆ.
ಅಕ್ರಮ ಹಣ ಪ್ರಕರಣಗಳಲ್ಲಿ 22,280 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಯಶಸ್ವಿಯಾಗಿ ಜಪ್ತಿ ಮಾಡಿದೆ.
Click