ನ್ಯೂಸ್ ನಾಟೌಟ್ : ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ರಷ್ಯಾ ಮಹತ್ತರ ಸಾಧನೆ ಮಾಡಿದೆ. ರಷ್ಯಾದ ಆರೋಗ್ಯ ಸಚಿವಾಲಯವು ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ತನ್ನ ದೇಶದ ನಾಗರಿಕರಿಗೆ ಉಚಿತವಾಗಿ ಸಿಗಲಿದೆ ಎಂಬುದಾಗಿ ಹೇಳಿಕೊಂಡಿದೆ.
ಕ್ಯಾನ್ಸರ್ ಲಸಿಕೆ (mRNA ಲಸಿಕೆ) ತಯಾರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೇ ಕಪ್ರಿನ್ ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷದಿಂದಲೇ ರಷ್ಯಾದ ನಾಗರಿಕರಿಗೆ ಈ ಕ್ಯಾನ್ಸರ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದಿರುವ ಆಂಡ್ರೇ, ರಷ್ಯಾದ ಈ ಆವಿಷ್ಕಾರ ಶತಮಾನದ ಅತಿದೊಡ್ಡ ಆವಿಷ್ಕಾರವೆಂದು ಬಣ್ಣಿಸಿದ್ದಾರೆ. ಅಲ್ಲದೇ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಇದು ಗೆಡ್ಡೆಯ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ ಎಂದು ವಿವರಿಸಿದ್ದಾರೆ.
mRNA ಅಥವಾ ಮೆಸೆಂಜರ್ ಆರ್ ಎನ್ ಎ ಎಂಬುದು ಮಾನವನ ಆನುವಂಶಿಕ ಸಂಕೇತದ ಒಂದು ಸಣ್ಣ ಭಾಗವಾಗಿದೆ. ಇದು ನಮ್ಮ ಜೀವಕೋಶಗಳಲ್ಲಿ ಪ್ರೋಟೀನ್ ಗಳನ್ನು ಉತ್ಪಾದಿಸುತ್ತದೆ. ವೈರಸ್ ಅಥವಾ ಬ್ಯಾಕ್ಟೀರಿಯಾವು ನಮ್ಮ ದೇಹವನ್ನು ಆಕ್ರಮಿಸಿದಾಗ, ಅದರ ವಿರುದ್ಧ ಹೋರಾಡಲು ಸಹಾಯಕವಾಗುವ ಪ್ರೋಟೀನ್ ಗಳನ್ನು ಉತ್ಪಾದಿಸಲು mRNA ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಈ ಲಸಿಕೆಯಿಂದ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಅಗತ್ಯವಾದ ಪ್ರೋಟೀನ್ ಗಳನ್ನು ಪಡೆಯುತ್ತವೆ, ಪ್ರತಿಕಾಯ (ಆಂಟಿಬಾಡಿ) ರೂಪುಗೊಳ್ಳುತ್ತವೆ. ಇದರೊಂದಿಗೆ ರೋಗನಿರೋಧಕ ಶಕ್ತಿತಯೂ ಬಲಗೊಳ್ಳುತ್ತದೆ ಎನ್ನಲಾಗಿದೆ.
Click