ನ್ಯೂಸ್ ನಾಟೌಟ್ : ಅಕ್ರಮ ಜೂಜಾಟ ಅಡ್ಡೆಯೊಂದಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಹಾಗೂ ಠಾಣಾಧಿಕಾರಿ ಹರೀಶ್ ನೇತೃತ್ವದ ತಂಡ ಆಟದಲ್ಲಿ ನಿರತರಾಗಿದ್ದ 34 ಮಂದಿ ಆರೋಪಿಗಳ ಸಹಿತ ಆಟಕ್ಕೆ ಬಳಸಿದ ಲಕ್ಷಾಂತರ ರೂ ನಗದನ್ನು ಇಂದು(ಡಿ.18) ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಎಂಬಲ್ಲಿನ ಆರ್.ಸಿ.ಸಿ ಮನೆಯೊಳಗೆ ಜುಗಾರಿ ಆಟ ಆಡಿಸುತ್ತಿದ್ದ ನಿಶಾಂತ್ ಎಂಬಾತ ತಪ್ಪಿಸಿಕೊಂಡಿದ್ದು, ಉಳಿದ ಒಟ್ಟು 33 ಜನರನ್ನು ಬಂಧಿಸಿದ್ದು, ಜುಗಾರಿ ಆಟಕ್ಕೆ ಬಳಸಿದ ರೂಪಾಯಿ 7,81,420/-, ಇಸ್ಪೀಟ್ ಎಲೆಗಳು, 3 ಸ್ಟೀಲ್ ಟೇಬಲ್, 10 ಪ್ಲಾಸ್ಟಿಕ್ ಚೆಯರ್ ಗಳು, ಟೇಬಲ್ ಸಹಿತ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳಾದ ನಿಶಾಂತ್ ರಾಜೇಶ್ (35), ಆನಂದ ಡಿ.ಸೋಜ (46), ಚೇತನ್ (39), ನಿತಿನ್ (34), ಪುಷ್ಪರಾಜ್ ಬಳ್ಳಾಲ್ (52), ನೌಷಾದ್ (37), ನಾಗೇಶ್ (36), ಅಬ್ದುಲ್ ಮಜೀದ್ (37), ಹರೀಶ್ (45), ಉಮೇಶ್ (52), ವಿನಾಯಕ (47) ಅಜಿತ್ ಕುಮಾರ್ (36) ರಾಘವೇಂದ್ರ (34), ಪ್ರವೀಣ್ ಕುಮಾರ್ (58), ಚೆನ್ನಕೇಶವ (42), ಭಾಸ್ಕರ (36), ವಿಘ್ನೇಶ (42), ಸಂಕೇತ್ (35), ಪವನ್ ರಾಜ್ (37), ಲೋಹಿತ್ (42), ಸತೀಶ್ ಇ., ಧೀರಜ್ಕುಮಾರ್ (26), ಚಿದಾನಂದ (30), ಪ್ರಸಾದ್ (37), ಸಂದೀಪ್ (34), ಅನಿಲ್ ಕುಮಾರ್ (30), ನಿತೀಶ್ (21), ಸತೀಶ್ (36) ಮುಸ್ತಫ ಕೆ.ಪಿ. (33), ಅರುಣ್ ಡಿ.ಸೋಜ (50), ರೋಹಿತಾಶ್ವ ಪೂಜಾರಿ ( 32), ವಿಜೇತ್ಕುಮಾರ್ (39), ನಿಖಿಲ್ (34) ಎಂಬವರ ವಿರುದ್ಧ ಎ.ಸಿ.ಜೆ. ಮತ್ತು ಜೆ.ಎಂ.ಎಫ್. ಸಿ. ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಾಗಿದೆ.
Click