ನ್ಯೂಸ್ ನಾಟೌಟ್ : ಪೋಷಕರ ಮಾತನ್ನು ಧಿಕ್ಕರಿಸಿ ತನ್ನ ಪ್ರೇಮಿಯನ್ನೇ ಮದುವೆಯಾದ ಮಗಳ ನಿರ್ಧಾರದಿಂದ ಬೇಸತ್ತ ತಂದೆಯೊಬ್ಬರು ಆಕೆಯ ಮದುವೆ ಹಾಲ್ ನಲ್ಲೇ ತಿಥಿ ಕಾರ್ಡ್ ಹಂಚಿದ ಅಚ್ಚರಿಯ ಘಟನೆ ರಾಜಸ್ಥಾನದ ಬೇವಾರ್ ನಲ್ಲಿ ನಡೆದಿದೆ.
ತಂದೆ-ತಾಯಿಯ ಇಚ್ಛೆಗೆ ವಿರುದ್ಧವಾಗಿ ಆಕೆ ತನ್ನ ಲವರ್ ನೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಈ ಬಗ್ಗೆ ತಂದೆ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ತನ್ನ ಮಗಳನ್ನು ತಮ್ಮ ಜೊತೆ ಕಳಿಸುವಂತೆಯೂ ಕೇಳಿದ್ದರು. ಆದರೆ ಪೊಲೀಸರ ಮುಂದೆ ಆಕೆ ತನ್ನ ಪೋಷಕರನ್ನು ಗುರುತಿಸಲು ನಿರಾಕರಿಸಿದ್ದು, ಅವರು ಯಾರು ಅನ್ನೋದೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಇದರಿಂದ ನೊಂದ ತಂದೆ ತನ್ನ ಜೀವಂತ ಮಗಳು ಸತ್ತಿದ್ದು, ಅವಳ ಶ್ರಾದ್ಧ ಕಾರ್ಯಕ್ಕೆ ಬನ್ನಿ ಎಂದು ಅವಳ ಮದುವೆಯ ದಿನವೇ ಹಾಲ್ ನಲ್ಲಿ ತಿಥಿ ಕಾರ್ಡ್ ಹಂಚಿದ್ದಾರೆ.
ವಿಮಲಾ ಎಂಬ ಈಕೆ ಪೋಷಕರ ವಿರೋಧವನ್ನು ಲೆಕ್ಕಿಸದೆ ಮದುವೆಯಾಗಿದ್ದು, ಅವಳನ್ನು ಕರೆದುಕೊಂಡು ಹೋಗಲು ತಂದೆ-ತಾಯಿ ಬಂದಾಗ ಆಕೆ ಅವರೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಮಗಳನ್ನು ಬಿ.ಇಡಿ ಓದಿದ ನಂತರ ಶಿಕ್ಷಕಿಯನ್ನಾಗಿ ಮಾಡಬೇಕೆಂಬ ಕನಸು ಪೋಷಕರದ್ದಾಗಿತ್ತು. ಆದರೆ ಶಿಕ್ಷಣ ಕಲಿಯುತ್ತಿದ್ದಾಗಲೇ ಕದ್ದು ಮುಚ್ಚಿ ಲವ್ ಮಾಡಿದ ಆಕೆ ಪೋಷಕರನ್ನು ವಿರೋಧಿಸಿ ಲವ್ ಮ್ಯಾರಿಜ್ ಆಗಿದ್ದ ಒಂದೆಡೆಯಾದ್ರೆ, ಪೊಲೀಸರ ಮುಂದೆ ತಂದೆ ತಾಯಿಯ ಪರಿಚಯ ಇಲ್ಲ ಎಂದು ಹೇಳಿದ್ದು ಪೋಷಕರಿಗೆ ಆಘಾತವುಂಟು ಮಾಡಿದೆ.
Click