ನ್ಯೂಸ್ ನಾಟೌಟ್: ಹಿಜಾಬ್ ಧರಿಸದೆ ಯೂಟ್ಯೂಬ್ ನಲ್ಲಿ ವರ್ಚುವಲ್ ಪ್ರದರ್ಶನ ನೀಡಿದ್ದಕ್ಕೆ ಇರಾನಿನ ಗಾಯಕಿಯನ್ನು ಬಂಧಿಸಲಾಗಿದೆ.
ಇರಾನ್ ನ ರಾಜಧಾನಿ ಟೆಹ್ರಾನ್ನಿಂದ ಸುಮಾರು 280 ಕಿಮೀ ದೂರದಲ್ಲಿರುವ ಮಜಂದರಾನ್ ಪ್ರಾಂತ್ಯದ ಸಾರಿ ನಗರದಲ್ಲಿ ಶನಿವಾರ(ಡಿ.14) ಗಾಯಕಿ ಪರಸ್ಟೂ ಅಹ್ಮದಿಯನ್ನು (27) ಬಂಧಿಸಲಾಗಿದೆ ಎಂದು ಆಕೆಯ ವಕೀಲ ಮಿಲಾದ್ ಪನಾಹಿಪೂರ್ ಹೇಳಿದ್ದಾರೆ.
ನಾಲ್ವರು ಪುರುಷ ಸಂಗೀತಗಾರರ ಜೊತೆಗೆ ತೋಳಿಲ್ಲದ ಕಪ್ಪು ಡ್ರೆಸ್ ಧರಿಸಿ, ಕೂದಲನ್ನು ಬಿಚ್ಚಿಟ್ಟು ಪ್ರದರ್ಶನ ನೀಡುತ್ತಿದ್ದ ಆಕೆ ತನ್ನ ಸಂಗೀತ ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಂಗೀತ ಕಚೇರಿಯು 15 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅವರ ಜೊತೆ ಕಾರ್ಯಕ್ರಮ ನಡೆಸಿದ ಇಬ್ಬರು ಪುರುಷ ಸಂಗೀತಗಾರರಾದ ಸೊಹೇಲ್ ಫಾಘಿಹ್ ನಾಸಿರಿ ಮತ್ತು ಎಹ್ಸಾನ್ ಬೈರಾಗ್ದರ್ ಅವರನ್ನು ಅದೇ ದಿನ ಟೆಹ್ರಾನ್ ನಲ್ಲಿ ಬಂಧಿಸಲಾಗಿದೆ.
Click