ಸುಳ್ಯ

ವಿಶ್ವದಲ್ಲೇ ಮೊದಲ ಮಹಿಳಾ ಜೇನುಗಡ್ಡದಾರಿ..! “ಹವ್ಯಕ ಕೃಷಿ ರತ್ನ” ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆ, ಯಾರಿವರು ಸೌಮ್ಯ..?

ನ್ಯೂಸ್ ನಾಟೌಟ್: ಜೇನು ನೋಣಗಳನ್ನು ಕೆಲವರು ನೋಡುವಾಗಲೇ ದೂರ ಓಡಿ ಹೋಗ್ತಾರೆ, ಆದರೆ ಇಲ್ಲೊಬ್ಬರು ಮಹಿಳೆ ಜೇನು ನೊಣಗಳನ್ನೇ ತಮ್ಮ ಮುಖದ ಮೇಲೆಲ್ಲ ಬಿಟ್ಟುಕೊಳ್ಳುತ್ತಾರೆ. ಇವರ ಹೆಸರು ಸೌಮ್ಯ ಪೆರ್ನಾಜೆ, ಇದೀಗ ಅವರಿಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡಮಾಡುವ ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.27ರಿಂದ29ರ ತನಕ ಮೂರನೇ ವರ್ಷದ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಚಾಲಕ ಗಣೇಶ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶ್ವದಲ್ಲೇ ಮೊದಲ ಮಹಿಳಾ ಜೇನುಗಡ್ಡದಾರಿ ಎಂಬ ಹೆಸರಿಗೆ ಇವರು ಪಾತ್ರರಾಗಿದ್ದಾರೆ. ಕಲಾ ನಿರ್ದೇಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕುಮಾರ್ ಪೆರ್ನಾಜೆಯವರ ಪತ್ನಿ. ನಂದನ್ ಕುಮಾರ್ , ಚಂದನ್ ಕುಮಾರ್ ಮಕ್ಕಳು. ಜೇನು ಕುಟುಂಬವನ್ನು ನೋಡಿ ತಿಳಿಯುವುದು ಬಹಳಷ್ಟು ಇದೆ ಎನ್ನುವ ಸೌಮ್ಯರಿಗೆ ಈಗಾಗಲೇ ಗಡಿನಾಡ ದ್ವನಿ, “ಮಧುಭೂಷಣ” ರಾಜ್ಯ ಪ್ರಶಸ್ತಿ , ಈಶ್ವರಮಂಗಲದಲ್ಲಿ ನಡೆದ ಗ್ರಾಮ ಗ್ರಾಮ ಸಾಹಿತ್ಯ ಸಂಭ್ರಮ ಮೂರನೇ ಸರಣಿ ಕಾರ್ಯಕ್ರಮದಲ್ಲಿ, ವಿಟ್ಲ “ಸ್ವರ ಸಿಂಚನ” ಸಂಗೀತೋತ್ಸವ 2024ರಲ್ಲೂ ಗೌರವಿಸಲಾಗಿತ್ತು. ಇವರು ಪಟಿಕ್ಕಲ್ಲು ರಾಮಚಂದ್ರ ಭಟ್ ಮತ್ತು ದೇವಕಿ ದಂಪತಿಯವರ ಪುತ್ರಿ.

Related posts

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ನ “ಚೈತನ್ಯ ಶ್ರೀ- 2024” ಪ್ರಶಸ್ತಿಗೆ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯ: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಡಿಕ್ಕಿ..! ಸವಾರರು ಪ್ರಾಣಾಪಾಯದಿಂದ ಪಾರು..!

ಸುಳ್ಯ ವೃತ್ತನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಮೋಹನ್ ಕೊಠಾರಿ