ದೇಶ-ವಿದೇಶವೈರಲ್ ನ್ಯೂಸ್

ಕೋತಿಗಳ ಕಾದಾಟದಿಂದ ರೈಲು ಸಂಚಾರ ವಿಳಂಬ..! ಇಲ್ಲಿದೆ ವಿಚಿತ್ರ ಘಟನೆ..!

ನ್ಯೂಸ್ ನಾಟೌಟ್: ರೈಲು ನಿಲ್ದಾಣದಲ್ಲಿ ಎರಡು ಕೋತಿಗಳ ನಡುವಿನ ಕಾದಾಟದಿಂದ ಸುಮಾರು ಒಂದು ಗಂಟೆಗಳ ಕಾಲ ರೈಲಿನ ಕಾರ್ಯಾಚರಣೆಯನ್ನು ವಿಳಂಬವಾದ ಘಟನೆ ಬಿಹಾರದ ಸಮಸ್ತಿಪುರ್ ಜಂಕ್ಷನ್ ನಲ್ಲಿ ಇಂದು(ಡಿ.9) ನಡೆದಿದೆ.

ಪ್ಲಾಟ್‌ ಫಾರ್ಮ್ ಸಂಖ್ಯೆ 4 ರ ಬಳಿ ಬಾಳೆಹಣ್ಣಿಗಾಗಿ ಕೋತಿಗಳು ಜಗಳವಾಡುತ್ತಿತ್ತು. ಜಗಳ ತಾರಕ್ಕೇರಿದಂತೆ ಒಂದು ಕೋತಿ ಇನ್ನೊಂದರ ಮೇಲೆ ರಬ್ಬರ್ ತರಹದ ವಸ್ತುವನ್ನು ಎಸೆದಿದೆ. ಆ ವಸ್ತುವು ಓವರ್ಹೆಡ್ ತಂತಿಗೆ ಬಡಿದು ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಕೂಡಲೇ ತಂತಿ ತುಂಡಾಗಿ ರೈಲಿನ ಬೋಗಿಯ ಮೇಲೆ ಬಿದ್ದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ ಎನ್ನಲಾಗಿದೆ.

ರೈಲ್ವೇ ನಿಲ್ದಾಣದ ವಿದ್ಯುತ್ ನಿರ್ವಹಣೆ ವಿಭಾಗವು ಕೂಡಲೇ ತಂತಿಯ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿತು. ಅದೇ ವೇಳೆ ಪ್ಲಾಟ್‌ ಫಾರ್ಮ್ ಸಂಖ್ಯೆ 4 ರಿಂದ ನಿರ್ಗಮಿಸಬೇಕಿದ್ದ ಬಿಹಾರ ಸಂಪರ್ಕ ಕ್ರಾಂತಿ ರೈಲು ಕೋತಿ ಜಗಳದಿಂದ ಸುಮಾರು 15 ನಿಮಿಷಗಳ ಕಾಲ ವಿಳಂಬವಾಗಿದೆ. ಇದು ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ.

Click

https://newsnotout.com/2024/12/uppinangady-nekkilady-kannada-news-ambulance-hits-home-ground/
https://newsnotout.com/2024/12/toilet-issue-kannada-news-rented-people-9-dna-test-viral-news/
https://newsnotout.com/2024/12/kananda-news-bomb-viral-news-viral-news-police/
https://newsnotout.com/2024/12/kannada-news-bus-viral-news-belagavi-viral-news-s/

Related posts

ಪತ್ನಿಯನ್ನು ಬೆಟ್ಟಕ್ಕೆ ಕರೆದೊಯ್ದು ಕೊಂದು ಅರಣ್ಯದಲ್ಲಿ ಶವ ಎಸೆದು ಪರಾರಿಯಾದ ಪತಿ..! ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದ ದಂಪತಿ..!

ನೀವೂ ಬೀದಿನಾಯಿಗಳಿಗೆ ಊಟ ಹಾಕ್ತಿರಾ..? ಹಾಗಾದ್ರೆ ಇನ್ಮುಂದೆ ಈ ರೂಲ್ಸ್ ಗಳನ್ನು ಪಾಲಿಸೋದು ಖಡ್ಡಾಯ..!

ರೈಲ್ವೆ ದುರಂತ: ಹಳಿ ತಪ್ಪಿದ 18 ಬೋಗಿಗಳು..! ಇಬ್ಬರು ಮೃತ್ಯು, ಹಲವರಿಗೆ ಗಾಯ