ನ್ಯೂಸ್ ನಾಟೌಟ್ : ಉತ್ತರ ಪ್ರದೇಶದ ಬರೇಲಿಯಲ್ಲಿ ಗೂಗಲ್ ಮ್ಯಾಪ್ಸ್ ನ ಎಡವಟ್ಟಿನ ಕಾರಣದಿಂದ ಭಾರೀ ದುರಂತವೊಂದು ನ.25 ರಂದು ಸಂಭವಿಸಿತ್ತು. ಮದುವೆ ಮನೆಗೆ ತಲುಪಲು ಗೂಗಲ್ ಮ್ಯಾಪ್ಸ್ ನೋಡಿಕೊಂಡು ರಾತ್ರಿ ಪ್ರಯಾಣಿಸುತ್ತಿದ್ದ ಇಬ್ಬರು ಕಾಮಗಾರಿ ನಡೆಯುತ್ತಿದ್ದ ಬ್ರಿಜ್ ಮೂಲಕ ತೆರಳಿ ಬಿದ್ದು ಸಾ* ವನ್ನಪ್ಪಿದ್ದರು. ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ನಂಬಿ ಕುಟುಂಬವೊಂದು ರಾತ್ರಿಯಿಡಿ ಕಾಡಿನಲ್ಲಿಯೇ ಕಳೆದ ಘಟನೆ ಬೆಳಗಾವಿಯ ಖಾನಾಪುರ ಭೀಮಗಢ ಅರಣ್ಯ ಪ್ರದೇಶಲ್ಲಿ ನಡೆದಿದೆ.
ಬಿಹಾರ ಮೂಲದ ರಣಜಿತದಾಸ್ ಕುಟುಂಬ ಗೋವಾಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗ ಮಧ್ಯೆ ಸಮೀಪ ಗೂಗಲ್ ಮ್ಯಾಪ್ ದಾರಿ ತೋರಿಸಿದೆ. ಮ್ಯಾಪ್ ನಂಬಿ ರಾತ್ರಿ ಭೀಮಗಢ ಅರಣ್ಯದೊಳಗೆ 7-8 ಕಿ.ಮೀ ಬಂದಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಪರದಾಡಿದ್ದಾರೆ. ನಾಲ್ಕು ಕಿಲೋ ಮೀಟರ್ ಹೊರ ಬಂದ ಬಳಿಕ ನೆಟವರ್ಕ್ ಸಿಕ್ಕ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ 112 ಕ್ಕೆಕರೆ ಮಾಡಿದ್ದರು.
ಪೊಲೀಸರ ನೆರನಿಂದ ಕುಟುಂಬ ಕಾಡಿನಿಂದ ಹೊರ ಬಂದಿದೆ. ಗೂಗಲ್ ಮ್ಯಾಪ್ ನಂಬಿ ರಾತ್ರಿ ಇಡೀ ಕಾರಿನಲ್ಲಿ ಕಳೆದಿದ್ದಾರೆ ಎನ್ನಲಾಗಿದೆ.
Click