ನ್ಯೂಸ್ ನಾಟೌಟ್: ಫೆಂಗಲ್ ಚಂಡಮಾರುತದ ಪರಿಣಾಮ ಮಂಗಳೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಅಪಾರ ಪ್ರಮಾಣದ ನೀರಿನಿಂದ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಇಂದು(ಡಿ.3) ಕುಸಿದಿದೆ. ಹೆದ್ದಾರಿ ಬದಿ ಗೇಲ್ ಗಾಸ್ ಕಂಪನಿ ಅಗೆದಿದ್ದ ಹೊಂಡದಲ್ಲಿ ನೀರು ತುಂಬಿ ಕೂಳೂರು ಬಳಿ ಮಂಗಳೂರಿನಿಂದ ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಹೆದ್ದಾರಿ ಬದಿ ಗೇಲ್ ಗಾಸ್ ಕಂಪನಿ ರಸ್ತೆ ಅಗೆದಿದ್ದರಿಂದ ಆ ಗುಂಡಿಯಲ್ಲೇ ಇದೀಗ ಮಳೆ ನೀರು ಶೇಖರಣೆಗೊಂಡು ಹೆದ್ದಾರಿ ಕುಸಿದಿದೆ. ಇನ್ನು ರಸ್ತೆ ಕುಸಿತವಾದ ಪಕ್ಕದಲ್ಲೇ ಭಾರೀ ವಾಹನಗಳು ಸಂಚರಿಸುತ್ತಿರುವುದರಿಂದ ಇನ್ನಷ್ಟು ಕುಸಿಯುವ ಭೀತಿ ಇದೆ ಎನ್ನಲಾಗಿದೆ.
Click