ನ್ಯೂಸ್ ನಾಟೌಟ್: ಮೈಸೂರಿನ ಜಗನ್ಮೋಹನ್ ಪ್ಯಾಲೇಸ್ನಲ್ಲಿ ಎನ್.ವಿ.ಎಸ್. ವತಿಯಿಂದ 9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ (ಡಿ.1) ಆಯೋಜಿಸಿದ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಸುಳ್ಯದ ಬಾಲಪ್ರತಿಭೆ ಸೋನ ಅಡ್ಕಾರ್ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಚಿನ್ನದ ಪಡೆದಿರುತ್ತಾಳೆ.
ಈಕೆ. ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6ನೇತರಗತಿ ವಿದ್ಯಾರ್ಥಿನಿಯಾಗಿದ್ದು, ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ದಂಪತಿಯ ಪುತ್ರಿ. ಈಕೆ ನೃತ್ಯ ತರಬೇತುದಾರ ಸಂತೋಷ್ ಮಂಗಳೂರು ಅವರಿಂದ ತರಬೇತಿ ಪಡೆದಿರುತ್ತಾಳೆ.